ಜಿಲ್ಲೆ

ಸಂಗೀತ ಮಹಾವಿದ್ಯಾಲಯದಲ್ಲಿ ಪರಾಕ್ರಮ ದಿವಸ

ಗದಗ: ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ದಿನವನ್ನು ಪರಾಕ್ರಮ ದಿವಸ ಎಂದು ಆಚರಿಸಲಾಗುತ್ತಿದ್ದು ಸುಭಾಷ್ ಚಂದ್ರ ಬೋಸರು ಶ್ರೇಷ್ಠ ಸ್ವತಂತ್ರ ಹೋರಾಟಗಾರರಾಗಿ ಅವರು ಬ್ರಿಟೀಷರಿಗೆ ಸಿಂಹ ಸ್ವಪ್ನ ರಾಗಿದ್ದರು ಎಂದು ಪ್ರಾಚಾರ್ಯ ಡಾ ಮೃತ್ಯುಂಜಯ ಶೆಟ್ಟರ್  ಅವರು ಹೇಳಿದರು .

ಡಾ.ಪಿ ಜಿ ಎ ಎಸ್ ಸಮಿತಿಯ ಪಂಡಿತ್ ಪಂಚಾಕ್ಷರಿ ಗವಾಯಿಗಳವರ ಸಂಗೀತ ಮಹಾವಿದ್ಯಾಲಯ ಹಾಗೂ ಸಂಗೀತ ಸ್ನಾತಕೋತರ ಕೇಂದ್ರದಲ್ಲಿ ಆಯೋಜಿಸಲಾದ ನೇತಾಜಿ ಸುಭಾಷ್ ಚಂದ್ರ ಭೂಸರ 127ನೇ ಜಯಂತೋತ್ಸವ ಕಾರ್ಯಕ್ರಮವನ್ನು ನೆರವೇರಿಸಿ ಅವರು ಮಾತನಾಡುತ್ತಾ ನೀವು ನನಗೆ ರಕ್ತ ಕೊಡಿ ನಾನು ನಿಮಗೆ ಸ್ವತಂತ್ರ ನೀಡುತ್ತೇನೆ ಎಂಬ ಘೋಷಣೆಗಳು ದೇಶದ ಯುವಕರನ್ನು ಪ್ರೇರೇಪಿಸಿದವು ಎಂದು ಅವರು ಹೇಳಿದರು.

ಉಪನ್ಯಾಸಕ ಗಂಗಾಧರ್ ಹಿಡ್ಕಿಮಠ ಅವರು ಮಾತನಾಡಿ ನೇತಾಜಿ ಅವರ ಸ್ಪೂರ್ತಿದಾಯಕ ಮಾತುಗಳು ಇಂದಿಗೂ ದೇಶಾಭಿಮಾನವನ್ನು ಮೂಡಿಸುತ್ತದೆ ನಮ್ಮ ಸ್ವಂತ ರಕ್ತದಿಂದ ನಾವು ಸ್ವತಂತ್ರವನ್ನು ಪಡೆದುಕೊಳ್ಳಬೇಕು ಜೈ ಹಿಂದ್ ಎಂಬ ಘೋಷಣೆ ಸೈನಿಕರ ಮನೋಬಲವನ್ನು ಗಟ್ಟಿಗೊಳಿಸಲು ಬಳಸಿದರು ಇದರಿಂದ ಭಾರತ ಸ್ವತಂತ್ರ ಹೋರಾಟದಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಭದ್ರ ಗೊಂಡಿತು. ದೇಶವನ್ನು ಬ್ರಿಟಿಷರಿಂದ ಮುಕ್ತಗೊಳಿಸಲು ಸ್ವತಂತ್ರ ಚಳುವಳಿಗೆ ಧುಮುಕಿದರು ರಾಷ್ಟ್ರೀಯತೆ ವಿಚಾರಧಾರೆಯಿಂದ ಸುಭಾಷ್ ಚಂದ್ರ ಬೋಸ್ರು ಹೆಚ್ಚು ಭಾವಿತರಾಗಿದ್ದರು ಎಂದು ಅವರು ಹೇಳಿದರು.
ವೇದಿಕೆಯ ಮೇಲೆ ಡಾ ಸುಮಿತ್ರ ಹಿರೇಮಠ,  ಶ್ರೀಮತಿ ಮಹಾಲಕ್ಷ್ಮಿ ಹೆಗಡೆ ,ಡಾ ಲತಾ ವೃತ್ತಿ ಕೊಪ್ ವಾಯ್ . ಆರ. ಮೂಲಿಮನಿ, ಕುಮಾರ್ ಮುತ್ತಿನ ಪೆಂಡಿಮಠ, ಎಸ್ ಡಿ ಕಾಡಣ್ಣವನವರ, ಎಂ ಎಂ ಎಮ್ಮೆ, ಪಂಚಾಕ್ಷರಿ ಹಿಡಿಕಿಮಠ, ಬಿ ಎಚ್ ಜೋಗ ರೆಡ್ಡಿ , ಎಚ್ ಓಲೆಕಾರ್ ಉಪಸ್ಥಿತರಿದ್ದರು.