ಹುಬ್ಬಳ್ಳಿ: ಇಲ್ಲಿನ ಲ್ಯಾಮಿಂಗ್ಟನ್ ರಸ್ತೆಯ ನಗರಕರ್ ಲೈಬ್ರರಿಯ ಆರ್ಟಿಸ್ಟ್ ಫೋರಮ್ಲ್ಲಿ ಆ. 12ರಂದು ಸಂಜೆ 6 ಗಂಟೆಗೆ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಹಿಂದುಸ್ತಾನಿ ಶಾಸ್ತ್ರೀಯ ಗಾಯಕ ರವೀಂದ್ರ ಜಕಾತಿ ಗಾಯನ ಪ್ರಸ್ತುತಪಡಿಸುವರು. ನಾಗರಾಜ ಕಡ್ಲಾಸ್ಕರ್ ತಬಲಾ, ಅಮರಯ್ಯ ಹಿರೇಮಠ ಸಂವಾದಿನಿ ಸಾಥ್ ನೀಡುವರು ಎಂದು ಪ್ರಕಟಣೆ ತಿಳಿಸಿದೆ.