ವಿಜಯವಾಣಿ ಸುದ್ದಿಜಾಲ ಧಾರವಾಡ
ಸ್ವರಯೋಗಿನಿ ಖ್ಯಾತಿಯ ಡಾ. ಪ್ರಭಾ ಅತ್ರೆ ಸ್ಮರಣೆಯಲ್ಲಿ ನಗರದ ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್ ಹಾಗೂ ಪುಣೆಯ ಸ್ವರಮಯಿ ಸಂಸ್ಥೆ ಆಶ್ರಯದಲ್ಲಿ ಸಂಗೀತ ಹಾಗೂ ಭರತನಾಟ್ಯಗಳ ವಿಶೇಷ ಕಾರ್ಯಕ್ರಮವನ್ನು ಮಾ. 15ರಂದು ಸಂಜೆ 5.30ಕ್ಕೆ ಇಲ್ಲಿನ ಸೃಜನಾ ರಂಗ ಮಂದಿರದಲ್ಲಿ ಏರ್ಪಡಿಸಲಾಗಿದೆ.
ವಿದುಷಿ ಪದ್ಮಾ ತಳವಲಕರ ಗಾಯನ ಪ್ರಸ್ತುತಪಡಿಸುವರು. ತೇಜಸ್ ಮಾಜಗಾಂವಕರ ತಬಲಾ ಹಾಗೂ ಅಮೇಯ ಬಿಚ್ಚು ಹಾಮೋರ್ನಿಯಂ ಸಾಥ್ ನೀಡುವರು. ನಂತರ ನೃತ್ಯ ವಿದುಷಿ ಡಾ. ಸುಚೇತಾ ಭಿಡೆ- ಚಾಪೇಕರ ಭರತನಾಟ್ಯ ಪ್ರದರ್ಶಿಸುವರು ಎಂದು ಪ್ರಕಟಣೆ ತಿಳಿಸಿದೆ.