ಜಿಲ್ಲೆ

ಸಂಗೀತ ಕಾರ್ಯಕ್ರಮ 10ರಂದು

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ಹಿಂದಿ ಚಲನಚಿತ್ರ ರಂಗದ ಶ್ರೇಷ್ಠ ಗಾಯಕಿ ದಿ. ಲತಾ ಮಂಗೇಶ್ಕರ ಸ್ಮರಣಾರ್ಥ ನಗರದ ಭಾರತ ಏಕತಾ ಆಂದೋಲನ ಮತ್ತು ಬಸವಶಾಂತಿ ಮಿಷನ್​ ವತಿಯಿಂದ ಇಲ್ಲಿನ ಆಲೂರ ವೆಂಕಟರಾವ್​ ಭವನದಲ್ಲಿ ಆ. 10ರಂದು ಸಂಜೆ 5 ಗಂಟೆಗೆ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಬಸವಶಾಂತಿ ಮಿಷನ್​ ಅಧ್ಯಕ್ಷ ಮಹಾದೇವ ಹೊರಟ್ಟಿ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಸಂಸದ ಪ್ರೊ. ಐ.ಜಿ. ಸನದಿ ಕಾರ್ಯಕ್ರಮ ಉದ್ಘಾಟಿಸುವರು. ಕಲಾವಿದ ಡಾ. ಶಶಿಧರ ನರೇಂದ್ರ ಉಪಸ್ಥಿತರಿರುವರು. ಡಾ. ಶರಣಪ್ಪ ಕೊಟಗಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಹುಬ್ಬಳ್ಳಿಯ ವಿಠ್ಠಲ ಪಡಸಲಗಿ ನೇತೃತ್ವದ ಸ್ವರಾಂಜಲಿ ತಂಡ ಗಾಯನ ಪ್ರಸ್ತುತಪಡಿಸಲಿದೆ. ತಂಡದಲ್ಲಿ ಸುಮಾರು 10 ಜನ ಕಲಾವಿದರಿದ್ದು, ಲತಾ ಮಂಗೇಶ್ಕರ್​ ಹಾಡುಗಳನ್ನು ಪ್ರಸ್ತುತಡಿಸಲಿದ್ದಾರೆ ಎಂದ ಅವರು, ಕೇಂದ್ರ ಸರ್ಕಾರವು ಪ್ರಸಿದ್ಧ ಗಾಯಕರಾದ ಕಿಶೋರ ಕುಮಾರ ಹಾಗೂ ಮುಖೇಶಕುಮಾರ ಅವರಿಗೆ ಪದ್ಮ ಪ್ರಶಸ್ತಿ ನೀಡಿ ಗೌರವಿಸಬೇಕು ಎಂದರು.
ಇನ್ನು ಕರೊನಾ ಸಮಯದಲ್ಲಿ ಹಿರಿಯ ನಾಗರಿಕರಿಗೆ ರೈಲು ಪ್ರಯಾಣದ ರಿಯಾಯಿತಿ ರದ್ದು ಮಾಡಲಾಗಿತ್ತು. ಇದೀಗ ಕರೊನಾ ಸಂಪೂರ್ಣ ದೂರವಾಗಿದ್ದರೂ ರಿಯಾಯಿತಿ ಆರಂಭಿಸಿಲ್ಲ. ಹೀಗಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಲೋಕಸಭೆ ವಿಪಕ್ಷ ನಾಯಕ ರಾಹುಲ್​ ಗಾಂಧಿ, ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ರ್ಖಗೆ ಅವರಿಗೆ ಪತ್ರ ಬರೆಯಲಾಗಿದೆ. ದೇಶದ ಎಲ್ಲ ರಾಜಕೀಯ ಪಕ್ಷಗಳು ಹಾಗೂ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಸಹ ಕೇಂದ್ರ ಸರ್ಕಾರಕ್ಕೆ ಈ ವಿಷಯವಾಗಿ ಒತ್ತಡ ಹೇರಬೇಕು ಎಂದು ಆಗ್ರಹಿಸಿದರು.
ಡಾ. ಮೃತ್ಯುಂಜಯ ಶೆಟ್ಟರ್​, ಡಾ. ಶ್ರೀಧರ ಕುಲಕರ್ಣಿ, ಮಂಜುನಾಥ ಮೊಹರೆ, ವಿಠ್ಠಲ ಪಡಸಲಗಿ, ಇತರರು ಇದ್ದರು.