ಹುಬ್ಬಳ್ಳಿ: ಇಲ್ಲಿಯ ಸಂತೋಷನಗರದ ಶಕ್ತಿ ಕಾಲನಿ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ನ. 28ರಂದು ಸಂಜೆ 6ಕ್ಕೆ ತಬಲಾ ಸೋಲೋ ಮತ್ತು ಭಕ್ತಿ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಕನ್ನಡ ರಾಜ್ಯೋತ್ಸವ ಅಂಗವಾಗಿ ಝೇಂಕಾರ ಸ್ಕೂಲ್ ಆಫ್ ತಬಲಾದ ಮನುಕುಮಾರ ಹಿರೇಮಠ ಅವರ ವಿದ್ಯಾಥಿರ್ಗಳು ಈ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಮಹಾನಗರ ಪಾಲಿಕೆ ಸದಸ್ಯೆ ಸೀಮಾ ಸಿದ್ದು ಮುಗಲಿಶೆಟ್ಟರ್, ಪಂ. ರವೀಂದ್ರ ಜಕಾತಿ, ಪಂ. ಬಾಲಚಂದ್ರ ನಾಕೋಡ್, ಬಿಜೆಪಿ ಧುರೀಣ ರಂಗಾ ಬದ್ದಿ, ರಾಘವೇಂದ್ರ ಧಾರವಾಡಕರ್ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ರಾಘವೇಂದ್ರ ಸ್ವಾಮಿ ಮಠದ ಅಧ್ಯಕ್ಷ ಗೋವಿಂದಾಚಾರ್ಯರು ತಿಳಿಸಿದ್ದಾರೆ.