ಜಿಲ್ಲೆ

ಸುಖಿ ಜೀವನಕ್ಕೆ ಸಂಗೀತ ಅವಶ್ಯ

ಕೃಷ್ಣ ಕುಲಕರ್ಣಿ

ಕಲಬುರಗಿ: ಇಂದಿನ ಆಧುನಿಕ ಯುಗದಲ್ಲಿ ಪ್ರತಿಯೊಬ್ಬರೂ ಒತ್ತಡದಲ್ಲಿ ಬದುಕು ಸಾಗಿಸುತ್ತಿದ್ದು, ಕೆಲ ಸಮಯ ಸಂಗೀತ ಆಲಿಸುವುದರಿಂದ ನೆಮ್ಮದಿ ಸಿಗುತ್ತದೆ ಎಂದು ಗುರುಶಾಂತಯ್ಯ ಕಳ್ಳಿಮಠ ಹೇಳಿದರು.

ತುಳಜಾ ಭವಾನಿ ದೇವಸ್ಥಾನದಲ್ಲಿ ಡಾ.ಪಂಡಿತ ಪುಟ್ಟರಾಜ ಸಾಂಸ್ಕೃತಿಕ ಸೇವಾ ಸಂಸ್ಥೆಯಿAದ ಕನ್ನಡ ರಾಜ್ಯೋತ್ಸವ ನಿಮಿತ್ತ ಶುಕ್ರವಾರ ಹಮ್ಮಿಕೊಂಡಿದ್ದ ಸ್ವರ ಸಂಗಮ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿ, ಸಂಗೀತ ಕೇಳುವುದರಿಂದ ಮನಸ್ಸಿನ ಕಾಯಿಲೆಗಳು ದೂರವಾಗುತ್ತವೆ. ಕಲಾವಿದರಿಗೆ ವೇದಿಕೆ ಕಲ್ಪಿಸಿ, ಪ್ರೋತ್ಸಾಹ ನೀಡುವ ಕೆಲಸ ಆಗಬೇಕಿದೆ ಎಂದರು.

ಮುಖAಡ ಚಂದ್ರಕಾAತ ರಾವೂರ ಉದ್ಘಾಟಿಸಿದರು. ಬಸವರಾಜ ಬಿದನೂರ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಅಧ್ಯಕ್ಷರಾದ ರಾಚಯ್ಯ ಸ್ವಾಮಿ ರಟಕಲ್, ಪ್ರಮುಖರಾದ ಸೈದಪ್ಪ ಗುತ್ತೇದಾರ್, ಮಹೇಶ ಅಲ್ಲಾಪುರೆ, ಹಣಮಂತ ದುಧನಿ, ಶಾಂತಪ್ಪ ಜಮಾದಾರ, ಸಂತೋಷ ಜೀವಣಗಿ ಇತರರಿದ್ದರು.

ಕಲಾವಿದರಾದ ಶಿವಶರಣಯ್ಯ ಸ್ವಾಮಿ, ದತ್ತರಾಜ ಕಲಶೆಟ್ಟಿ, ಸೈದಪ್ಪ ಚೌಡಾಪುರ, ಶಿವಕುಮಾರ ಪಾಟೀಲ್, ಸಿದ್ದಾರೂಢ ಅವರಳ್ಳಿ, ಚೇತನ ಬೀದಿಮನಿ, ವಿನೋದ ದಸ್ತಾಪುರ, ತೋಟಯ್ಯ ಶಾಸ್ತಿç, ಉದಯಶಾಸ್ತಿç, ಮೌನೇಶ ಪಾಂಚಾಳ, ಶಿವಾನಂದ ಹಿತ್ತಲಶಿರೂರ ಸಂಗೀತ ಸೇವೆ ಸಲ್ಲಿಸಿದರು. ಅಕ್ಕನ ಬಳಗದಿಂದ ಭಜನೆ ನಡೆಯಿತು.