ಕೆರೂರ ಪಟ್ಟಣದ ಹೊಸಪೇಟೆ ಬಡವಾಣೆಯ ಬನಶಂಕರಿ ದೇವಿ ದೇವಸ್ಥಾನ ಆವರಣದಲ್ಲಿ ಗುರುವಾರ ನಡೆದ ಸಂಗೀತ ಸ್ವರಾಂಜಲಿ ಕಾರ್ಯಕ್ರಮದಲ್ಲಿ ರುದ್ರಮುನಿ ಸ್ವಾಮೀಜಿ ಮಾತನಾಡಿದರು. ಪಟ್ಟಣ ಪಂಚಾಯಿತಿ ಅಧ್ಯಕ್ಷೆ ನಿರ್ಮಲಾ ಮದಿ, ಸದಸ್ಯರಾದ ವಿಠ್ಠಲಗೌಡ ಗೌಡರ, ಕುಮಾರ ಐಹೊಳ್ಳಿ, ದೇವಾಂಗ ಸಮಾಜದ ಅಧ್ಯಕ್ಷ ಸಂಕಣ್ಣ ಹೊಸಮನಿ ಇತರರಿದ್ದರು. 
ಜಿಲ್ಲೆ

ಸಂಗೀತವೊಂದು ದೈವಿ ಕಲೆ

Vijayapura - Desk - Gurappa Lokuri

ಕೆರೂರ: ನಾಡಿನ ಪರಂಪರೆ, ಸಂಸ್ಕೃತಿ, ಕಲೆ, ಸಾಹಿತ್ಯವು ಸಂಗೀತದಲ್ಲಿ ಜೀವಂತವಾಗಿರುವುದರಿಂದ ಸಂಗೀತವೊಂದು ದೈವಿ ಕಲೆಯಾಗಿದೆ ಎಂದು ರುದ್ರಮುನಿ ಸ್ವಾಮೀಜಿ ಹೇಳಿದರು.

ಪಟ್ಟಣದ ಶಾರದಾ ಸಂಗೀತ ಮಹಾವಿದ್ಯಾಲಯ ಸಾಂಸ್ಕೃತಿಕ ಶೈಕ್ಷಣಿಕ ಸೇವಾ ಸಂಸ್ಥೆ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಸಂಗೀತ ಸ್ವರಾಂಜಲಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಯುವ ಪೀಳಿಗೆಯಲ್ಲಿ ಸಂಗೀತ ಹಾಗೂ ಕಲೆಯ ಅಭಿರುಚಿ ಬೆಳೆಸುವ ಜವಾಬ್ದಾರಿ ಹಿರಿಯ ಕಲಾವಿದರದ್ದಾಗಿದೆ. ಪಾಲಕರು ಇಂದಿನ ಮಕ್ಕಳಿಗೆ ಶಿಕ್ಷಣದೊಂದಿಗೆ ಸಂಗೀತ ಕಲಿಸಬೇಕು ಎಂದು ಸಲಹೆ ನೀಡಿದರು.

ಕನ್ನಡ ಪ್ರಾಧ್ಯಾಪಕ ಬಸವರಾಜ ಹೂಗಾರ ಮಾತನಾಡಿದರು.

ಕೆರೂರ ಸಾಂಸ್ಕೃತಿಕ ಪ್ರತಿಷ್ಠಾನ ಅಧ್ಯಕ್ಷ ವೆಂಕಟೇಶ ಮೂರ್ತಿ ಶಿರೂರ ಮಾತನಾಡಿ, ಜಗತ್ತಿನ ಅನೇಕ ರೋಗಗಳಿಗೆ ಸಂಗೀತವು ಸಂಜೀವಿನಿ ಔಷಧದಂತೆ ಕೆಲಸ ಮಾಡುತ್ತಿದೆ ಎಂದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷೆ ನಿರ್ಮಲಾ ಮದಿ, ಸದಸ್ಯರಾದ ವಿಠ್ಠಲಗೌಡ ಗೌಡರ, ಕುಮಾರ ಐಹೊಳ್ಳಿ, ದೇವಾಂಗ ಸಮಾಜದ ಅಧ್ಯಕ್ಷ ಸಂಕಣ್ಣ ಹೊಸಮನಿ, ಸಂಕಪ್ಪ ಕರಿಮರಿ, ಮಲ್ಲು ಪೂಜಾರ, ನೋಮನ್ನಾ ಬೀಳಗಿ, ಶಿಕ್ಷಕಿ ನಂದಿನಿ ಬೋರಣ್ಣವರ, ಶಾರದಾ ಸಂಗೀತ ಮಹಾವಿದ್ಯಾಲಯದ ಅಧ್ಯಕ್ಷ ಘನಶಾಮ ಬೋರಣ್ಣವರ, ತುಳಸಿದಾಸ್ ಬೋರಣ್ಣವರ, ಶ್ರೀಧರ ಬೋರಣ್ಣವರ ಇತರರಿದ್ದರು.