ಜಯನಗರದಲ್ಲಿ ನಡೆದ 24ನೇ ವಾರ್ಷಿಕ ಶ್ರೀ ಗುರು ಸಮರ್ಥ ಸಂಗೀತೋತ್ಸವದಲ್ಲಿ ಪಂಡಿತ್ ಟಿ. ರಂಗ ಪೈ ಅವರಿಗೆ ತಬಲಾ ನಾದ ಸಾಧಕ ಪ್ರಶಸ್ತಿ ಪ್ರದಾನ ಮಾಡಲಾಯಿತು. folder
ಜಿಲ್ಲೆ

ಒತ್ತಡ ನಿವಾರಿಸುವ ಶಕ್ತಿ ಸಂಗೀತಕ್ಕಿದೆ

ಮನುಷ್ಯನ ಒತ್ತಡ ನಿವಾರಣೆ ಮಾಡುವ ಶಕ್ತಿ ಸಂಗೀತಕ್ಕೆ ಇದೆ. ಹಿರಿಯರು ಕಟ್ಟಿ ಬೆಳೆಸಿಕೊಂಡು ಬಂದಿರುವ ಸಂಗೀತ ಸಂಸ್ಥೆಗಳಿಂದ ಸಂಗೀತೋತ್ಸವ ಕಾರ್ಯಕ್ರಮ ಆಯೋಜನೆ ಮಾಡಿರುವುದು ಶ್ಲಾಘನೀಯ ಎಂದು ಆಂತರಿಕ ಭದ್ರತಾ ವಿಭಾಗದ ಡಿಜಿಪಿ ಬಿ. ದಯಾನಂದ್ ಹೇಳಿದ್ದಾರೆ.

ಬೆಂಗಳೂರು: ಮನುಷ್ಯನ ಒತ್ತಡ ನಿವಾರಣೆ ಮಾಡುವ ಶಕ್ತಿ ಸಂಗೀತಕ್ಕೆ ಇದೆ. ಹಿರಿಯರು ಕಟ್ಟಿ ಬೆಳೆಸಿಕೊಂಡು ಬಂದಿರುವ ಸಂಗೀತ ಸಂಸ್ಥೆಗಳಿಂದ ಸಂಗೀತೋತ್ಸವ ಕಾರ್ಯಕ್ರಮ ಆಯೋಜನೆ ಮಾಡಿರುವುದು ಶ್ಲಾಘನೀಯ ಎಂದು ಆಂತರಿಕ ಭದ್ರತಾ ವಿಭಾಗದ ಡಿಜಿಪಿ ಬಿ. ದಯಾನಂದ್ ಹೇಳಿದ್ದಾರೆ.

ಜಯನಗರದ ಶ್ರೀ ಜಯರಾಮ ಸೇವಾ ಮಂಡಳಿಯಲ್ಲಿ ಶ್ರೀ ಗುರು ಸಮರ್ಥ ಸಂಗೀತ ವಿದ್ಯಾಲಯ ಹಮ್ಮಿಕೊಂಡಿದ್ದ 24ನೇ ವಾರ್ಷಿಕ ಶ್ರೀ ಗುರು ಸಮರ್ಥ ಸಂಗೀತೋತ್ಸವ ಕಾರ್ಯಕ್ರಮದಲ್ಲಿ ಪಂಡಿತ್ ಟಿ.ರಂಗ ಪೈ ಅವರಿಗೆ ತಬಲಾ ನಾದ ಸಾಧಕ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು. ಸಾಧಕರನ್ನು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡುತ್ತಿರುವುದು ಕಿರಿಯ ಕಲಾವಿಧರಿಗೆ ಸ್ಪೂರ್ತಿಯಾಗಲಿದೆ. ದೈನಂದಿನ ಕರ್ತವ್ಯದ ನಡುವೆ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸುವುದರಿಂದ ವಿಭಿನ್ನ ಅನುಭವ ಸಿಕ್ಕಿದೆ ಎಂದರು.

ಪಂಡಿತ್ ಸತೀಶ್ ಹಂಪಿಹೊಳಿ ಮಾತನಾಡಿ, ಪಂಡಿತ್ ರಂಗ ಪೈ ಅವರ ಸಂಗೀತ ಸಾಧನೆ, ಸರಳತೆ ಗೌರವಕ್ಕೆ ಸಂಪೂರ್ಣ ಅರ್ಹರನ್ನಾಗಿಸಿದೆ. ಅವರ ವ್ಯಕ್ತಿತ್ವ ಯುವ ಕಲಾವಿದರಿಗೆ ವಾದರಿ ಎಂದು ಅಭಿಪ್ರಾಯಪಟ್ಟರು.

ಹಿರಿಯ ಪತ್ರಕರ್ತ ರವೀಂದ್ರ ಭಟ್, ಗಾಯಕರಾದ ಶಿವಕುವಾರ್ ಮಹಾಂತ್, ಉಮಾ ಕುಲಕರ್ಣಿ, ವೆಂಕಟ್ ನಿತಿನ್ ಹಿಂದೂಸ್ತಾನಿ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ಶ್ರೀ ಗುರು ಸಮರ್ಥ ಸಂಗೀತ ವಿದ್ಯಾಲಯ ಅಧ್ಯಕ್ಷ ಅಮೃತೇಶ್ ಕುಲಕರ್ಣಿ, ಎಂ. ವೆಂಕಟರಮಣ, ಪಿ. ನರಸಿಂಹಮೂರ್ತಿ ಉಪಸ್ಥಿತರಿದ್ದರು.