ತುರ್ವಿಹಾಳದ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಪಂ.ಪುಟ್ಟರಾಜ ಗವಾಯಿಗಳ ಜಯಂತಿ ಹಾಗೂ ಸಂಗೀತ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಮುಖ್ಯಶಿಕ್ಷಕ ಚಿದಾನಂದಯ್ಯ ಗುರುವಿನ್ ಉದ್ಘಾಟಿಸಿದರು. ಸರ್ವೇಶ್ವರಮಠದ ಗುಂಡಯ್ಯ ಅಪ್ಪಾಜಿ, ಪುರವರ ಮಠದ ಅಮರಗುಂಡಯ್ಯ ಸ್ವಾಮೀಜಿ, ಮುದಿ ಸಂಗಯ್ಯ ತಾತ ಹೀರೆಮಠ ಇತರರಿದ್ದರು. 
ಜಿಲ್ಲೆ

ಸಂಗೀತಕ್ಕಿದೆ ಮನಸ್ಸನ್ನು ತಿಳಿಗೊಳಿಸುವ ಶಕ್ತಿ

ಸಿಂಧನೂರು: ಸಂಗೀತದ ಗುರು ಎಂದರೆ ಗದುಗಿನ ಪಂ. ಪುಟ್ಟರಾಜ ಗವಾಯಿಗಳು. ಅಂಧರಿಗೆ ಸಂಗೀತದ ಬೆಳಕು ನೀಡಿ ಅವರ ಭವಿಷ್ಯ ಉಜ್ವಲಗೊಳಿಸಿದ್ದಾರೆ ಎಂದು ಗುಂಡ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ಚಿದಾನಂದಯ್ಯ ಗುರುವಿನ್ ಹೇಳಿದರು.

ತುರ್ವಿಹಾಳದ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯಲ್ಲಿ ಭಾನುವಾರ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಬೆಂಗಳೂರು, ಜಿಲ್ಲಾ ಸಂಗೀತ ಶಿಕ್ಷಕರ ಕಲಾ ಬಳಗ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಸಾಂಸ್ಕೃತಿಕ ವೇದಿಕೆ ಗುಜ್ಜಳ್ಳಿ (ತುರ್ವಿಹಾಳ) ಯಿಂದ ಹಮ್ಮಿಕೊಂಡಿದ್ದ ಪಂಡಿತ್ ಪುಟ್ಟರಾಜ ಗವಾಯಿಗಳ 111ನೇ ಜಯಂತಿ ಹಾಗೂ ಸಂಗೀತ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಠಿಣ ಪರಿಸ್ಥಿತಿಯಲ್ಲೂ ಮನಸ್ಸಿನ ಭಾವನೆ ತಿಳಿಗೊಳಿಸುವ ಶಕ್ತಿ ಸಂಗೀತಕ್ಕಿದೆ. ಇಂಥ ಕಾರ್ಯಕ್ರಮದಿಂದ ಸಂಗೀತದ ಸುಧೆ ಹರಡುತ್ತಿರುವುದು ಶ್ಲಾಘನೀಯ. ಪುಟ್ಟರಾಜ ಗವಾಯಿಗಳಿಗೆ ಮನಸ್ಸಿನಲ್ಲಿ ಸಂಗೀತದ ಕಣ್ಣು ದೊಡ್ಡ ಮಟ್ಟದಲ್ಲಿ ಬೆಳಗಿಸಿತು ಎಂದರು.

ಪುರವರ ಮಠದ ಅಮರಗುಂಡಯ್ಯ ಸ್ವಾಮೀಜಿ ಮಾತನಾಡಿ, ಮಕ್ಕಳಿಗೆ ಸಂಗೀತ ಹಾಗೂ ಸಂಸ್ಕಾರ ಕಲಿಸಬೇಕು. ಜಾನಪದ, ತತ್ವಪದ, ಭರತನಾಟ್ಯ, ತಬಲ, ಹಾರ್ಮೋನಿಯಂ ಕಲಿಕೆಗೆ ಮಕ್ಕಳನ್ನು ತಯಾರಿಸಬೇಕಿದೆ ಎಂದರು.

ರಾಜಲಬಂಡದ ಎಂಡಿಎಸ್ ಶಾಲೆ ಶಿಕ್ಷಕ ವಿರೂಪಾಕ್ಷಯ್ಯ ಅವರಿಗೆ ಸಂಗೀತ ಶಿಕ್ಷಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸರ್ವೇಶ್ವರಮಠದ ಗುರುಗುಂಡಯ್ಯ ಅಪ್ಪಾಜಿ, ಮುದಿ ಸಂಗಯ್ಯ ತಾತ ಹೀರೆಮಠ, ಪಪಂ ಅಧ್ಯಕ್ಷ ಕೆ.ಶಾಮಿದ್‌ಸಾಬ್ ಜೌದ್ರಿ, ಉಪಾಧ್ಯಕ್ಷೆ ಗಂಗಮ್ಮ ಯಲ್ಲಪ್ಪ ಭೋವಿ, ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ ಪ್ರಾಚಾರ್ಯ ಗಂಗಪ್ಪ ಕವಿತಾಳ, ಶಿಕ್ಷಕರಾದ ಮರಿಯಪ್ಪ ನಾಮದ್, ಬಿ.ರುದ್ರೇಶ್ ಕರಡಲ್ಲ, ಫಯಾಜ್ ಅಹ್ಮದ್, ಮಂಜುನಾಥ ಪತ್ರಿಮಠ, ಅಖಂಡಯ್ಯ ಹಿರೇಮಠ, ಪ್ರಮುಖರಾದ ಕರಿಲಿಂಗಪ್ಪ, ನಾಗಭೂಷಣ ನಾಗಲಾಪುರ, ಮಹಾಂತಯ್ಯ ಸ್ವಾಮಿ, ವಿಶ್ವೇಶ್ವರಯ್ಯ ಹಿರೇಮಠ, ಶರಣಬಸವ ಇತರರಿದ್ದರು.