ಜಿಲ್ಲೆ

ಸಂಗೀತೋತ್ಸವ ಇಂದು

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಪಂ. ಚಂದ್ರಶೇಖರ ಪುರಾಣಿಕಮಠ ಸ್ಮೃತಿ ಸಂಗೀತ ಸಭಾ ವತಿಯಿಂದ ಜು. 28ರಂದು ಬೆಳಗ್ಗೆ 10 ಗಂಟೆಗೆ ಪಂ. ಚಂದ್ರಶೇಖರ ಪುರಾಣಿಕಮಠರ 14ನೇ ಪುಣ್ಯಸ್ಮರಣೋತ್ಸವ ಕಾರ್ಯಕ್ರಮವನ್ನು ಇಲ್ಲಿನ ಸಾಧನಕೇರಿಯ ಪ್ರಶಾಂತನಗರದ ಗುರುಕೃಪಾ ಸಭಾಭವನದಲ್ಲಿ ಏರ್ಪಡಿಸಲಾಗಿದೆ.
ಅತಿಥಿಗಳಾಗಿ ಕವಿವಿ ಪ್ರಾಧ್ಯಾಪಕಿ ಡಾ.ವಿಜಯಲಕ್ಷ್ಮೀ ಅಮ್ಮಿನಭಾವಿ ಆಗಮಿಸುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ಸಂಗೀತ ಸಭಾ ಗೌರವಾಧ್ಯಕ್ಷ ಎನ್​.ಟಿ.ಪರಾಂಜಪೆ, ಉಪಾಧ್ಯೆಕ್ಷೆ ಡಾ.ಸೌಭಾಗ್ಯ ಕುಲಕರ್ಣಿ, ಕಾರ್ಯದರ್ಶಿ ಶಿವಯೋಗಿ ಪುರಾಣಿಕಮಠ ಉಪಸ್ಥಿತರಿರುವರು. ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸುವರು. ಗಾಯಕ ಪಂ.ಅಶೋಕ ಹುಗ್ಗಣ್ಣವರ ಅವರನ್ನು ಸನ್ಮಾನಿಸಲಾಗುವುದು.
ವಿದುಷಿ ಭಾರ್ಗವಿ ಕುಲಕರ್ಣಿ ಸುಗಮ ಸಂಗೀತ, ಪಂ.ಅಶೋಕ ಹುಗ್ಗಣ್ಣವರ ಶಾಸ್ತ್ರೀಯ ಗಾಯನ ಹಾಗೂ ಪಂ.ಚಂದ್ರಶೇಖರ ಪುರಾಣಿಕಮಠರ ಶಿಷ್ಯಂದಿರು ಗಾಯನ ಪ್ರಸ್ತುತಪಡಿಸಲಿದ್ದಾರೆ. ತಬಲಾದಲ್ಲಿ ಪಂ. ಅಲ್ಲಮಪ್ರಭು ಕಡಕೋಳ, ಭೂಷಣ ಗುಡ್ಡದಮಠ, ಜಯತೀರ್ಥ ಪಂಚಮುಖಿ ಹಾಗೂ ಹಾಮೋರ್ನಿಯಂದಲ್ಲಿ ಡಾ. ಪರಶುರಾಮ ಕಟ್ಟಿಸಂಗಾವಿ ಹಾಗೂ ಪ್ರಮೋದ ಹೆಬ್ಬಳ್ಳಿ ಸಾಥ್​ ನೀಡುವರು ಎಂದು ಸಂಗೀತ ಸಭಾ ಅಧ್ಯಕ್ಪ ಕುಮಾರಸ್ವಾಮಿ ಪುರಾಣಿಕಮಠ ತಿಳಿಸಿದ್ದಾರೆ.