ಜಿಲ್ಲೆ

ಸಂಗೀತೋತ್ಸವ 25ರಂದು

ವಿಜಯವಾಣಿ ಸುದ್ದಿಜಾಲ ಧಾರವಾಡ
ಪಂ. ರಾಜಶೇಖರ ಮನಸೂರ ಪುಣ್ಯಸ್ಮರಣೆ ನಿಮಿತ್ತ ನಗರದ ಆಲೂರು ವೆಂಕಟರಾವ್​ ಸಾಂಸ್ಕೃತಿಕ ಭವನದಲ್ಲಿ ಶ್ರೀ ಕುಮಾರೇಶ್ವರ ಕಲ್ಚರಲ್​ ಸೊಸೈಟಿ ವತಿಯಿಂದ ಸಂಗೀತೋತ್ಸವ ಏರ್ಪಡಿಸಲಾಗಿದೆ.
ಪಂ. ಎಂ. ವೆಂಕಟೇಶಕುಮಾರ ಸಂಗೀತೋತ್ಸವ ಸಮಾರಂಭ ಉದ್ಘಾಟಿಸುವರು. ಹಿರಿಯ ಗಾಯಕ ಡಾ. ಶಾಂತಾರಾಮ ಹೆಗಡೆ, ಕರ್ನಾಟಕ ಕೇಂದ್ರೀಯ ವಿಶ್ವ ವಿದ್ಯಾಲಯದ ಸಂಗೀತ ಪ್ರಾಧ್ಯಾಪಕಿ ಡಾ. ಜಯದೇವಿ ಜಂಗಮಶೆಟ್ಟಿ, ಹಿರಿಯ ಹಾಮೋರ್ನಿಯಂ ಕಲಾವಿದ ಯು.ಎಂ. ನಿರಂಜನಮೂರ್ತಿ ಅತಿಥಿಗಳಾಗಿ ಆಗಮಿಸುವರು. ಶ್ರೀ ಕುಮಾರೇಶ್ವರ ಕಲ್ಚರಲ್​ ಸೊಸೈಟಿ ಅಧ್ಯಕ್ಷ ಮಲ್ಲಿಕಾರ್ಜುನ ಚಿಕ್ಕಮಠ ಅಧ್ಯತೆ ವಹಿಸುವರು.
ಸಂಗೀತೋತ್ಸವದಲ್ಲಿ ಪಂ.ರಾಜಶೇಖರ ಮನಸೂರ ಶಿಷ್ಯರಾದ ಡಾ. ಚಂದ್ರಿಕಾ ಕಾಮತ, ಡಾ. ಮೃತ್ಯುಂಜಯ ಅಗಡಿ, ಡಾ. ಮಿಥುನ ಚಕ್ರವರ್ತಿ, ಡಾ. ಜಯದೇವಿ ಜಂಗಮಶೆಟ್ಟಿ, ಯುವ ಗಾಯಕಿ ಜೆ. ರ್ಪೂವಿ ಗಾಯನ ಪ್ರಸ್ತುತ ಪಡಿಸುವರು. ತಬಲಾದಲ್ಲಿ ಪಂ. ಅಲ್ಲಮಪ್ರಭು ಕಡಕೋಳ, ಉಸ್ತಾದ್​ ನಿಸ್ಸಾರ ಅಹಮ್ಮದ್​, ಪ್ರಸಾದ ಮಡಿವಾಳರ ಮತ್ತು ಹಾಮೋರ್ನಿಯಂದಲ್ಲಿ ಯು.ಎಂ.ನಿರಂಜನಮೂತಿರ್, ಡಾ. ಪರಶುರಾಮ ಕಟ್ಟಿಸಂಗಾವಿ ಹಾಗೂ ಬಸವರಾಜ ಹಿರೇಮಠ ಸಾಥ್​ ನೀಡುವರು ಎಂದು ಸಂಯೋಜಕ ಪ್ರಕಾಶ ಬಾಳಿಕಾಯಿ ತಿಳಿಸಿದ್ದಾರೆ.