ವಿಜಯವಾಣಿ ಸುದ್ದಿಜಾಲ ಧಾರವಾಡ
ಭಾರತೀಯ ಸಂಗೀತ ವಿದ್ಯಾಲಯ ಹಾಗೂ ದಾಸಾ ಟ್ರಸ್ಟ್ ವತಿಯಿಂದ ನಗರದ ಸೃಜನಾ ರಂಗಮಂದಿರದಲ್ಲಿ ಏ. 21ರಂದು ಸಂಜೆ 5.15ಕ್ಕೆ ಗಾಯನ- ವಾದನಗಳ ನಿನಾದ ಸಂಗೀತ ಸಂಜೆ ಏರ್ಪಡಿಸಲಾಗಿದೆ ಎಂದು ವಿದ್ಯಾಲಯದ ಉಪಾಧ್ಯಕ್ಷ ಶಫೀಕ್ ಖಾನ್ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಗೀತ ಕಾರ್ಯಕ್ರಮದಲ್ಲಿ ಬೆಂಗಳೂರಿನ ಸಂಜೀವ ಕೊತಿರ್ ಹಾಗೂ ಜಯತೀರ್ಥ ಕುಲಕಣಿರ್ ಸಿತಾರ, ಬಾನ್ಸುರಿ ಜುಗಲಬಂದಿಗೆ ಹೇಮಂತ ಜೋಶಿ ತಬಲಾ ಸಾಥ್ ನೀಡಲಿದ್ದಾರೆ. ನಂತರ ಭಾರತಿ ಪ್ರತಾಪ ಗಾಯನಕ್ಕೆ ಗುರುಪ್ರಸಾದ ಹೆಗಡೆ ಹಾಮೋರ್ನಿಯಂ ಹಾಗೂ ನಾಶೀರ್ ಅಹ್ಮದ್ ತಬಲಾ ಸಾಥ್ ನೀಡುವರು ಎಂದರು.
ಪ್ರವಿಣ ಹೂಗಾರ, ಇತರರು ಇದ್ದರು.