ಜಿಲ್ಲೆ

ರಾಮ ಭಜನೆ ದಾಸವಾಣಿ

Dharwada - Basavaraj Idli

ಹುಬ್ಬಳ್ಳಿ: ಅಯೋಧ್ಯೆಯಲ್ಲಿ ಶ್ರೀ ರಾಮನ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಹವ್ಯಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆ ಆಶ್ರಯದಲ್ಲಿ ಜ. 26ರಂದು ಸಂಜೆ ರಾಮ ಭಜನೆ ಹಾಗೂ ದಾಸವಾಣಿ ಕಾರ್ಯಕ್ರಮವನ್ನು ಗೋಕುಲ ರಸ್ತೆ ಹವ್ಯಕ ಭವನದಲ್ಲಿ ಏರ್ಪಡಿಸಲಾಗಿದೆ.

ಅಂದು ಮಧ್ಯಾಹ್ನ 3ರಿಂದ ರಾಮತಾರಕ ಮಂತ್ರ ಜಪ, ಪೂಜೆ, 4ರಿಂದ ಜಯಶ್ರೀ ಹೆಗಡೆ ಮತ್ತು ಸಂಗಡಿಗರಿಂದ ಭಜನೆ, ಸಂಜೆ 5ಕ್ಕೆ ಪೃಥಾ ಭೂಷಣ ಭಟ್ ಅವರಿಂದ ಭಜನೆ, 5.30ಕ್ಕೆ ದಾಸವಾಣಿ ನಡೆಯಲಿದೆ.

ಪಂ. ಕೃಷ್ಣೇಂದ್ರ ವಾಡೇಕರ ಅವರ ಗಾಯನವಿದ್ದು, ಅನಂತ ಹೆಗಡೆ ವಾಜಗಾರ ತಬಲಾ, ಕಿರಣ ಅಯಾಚಿತ್ ಹಾಮೋರ್ನಿಯಂ ಸಾಥ್ ನೀಡುವರು ಎಂದು ಪ್ರಕಟಣೆ ತಿಳಿಸಿದೆ.