ಜಿಲ್ಲೆ

ವಿವಿಗಳಲ್ಲಿ ಸುಗಮ ಸಂಗೀತ ಕೋರ್ಸ್​: ಕುಲಪತಿ ಡಾ. ನಾಗೇಶ್​ ಬೆಟ್ಟಕೋಟೆ ಭರವಸೆ

Bengaluru - General - Rama Kishan K V

ಬೆಂಗಳೂರು: ಕಳೆದ ನೂರು ವರ್ಷಗಳಲ್ಲಿ ಶ್ರೀಮಂತವಾಗಿ ಬೆಳೆದು ಬಂದಿರುವ ಸುಗಮ ಸಂಗೀತವನ್ನು ವಿಶ್ವವಿದ್ಯಾಲಯಗಳಲ್ಲಿ ಹೊಸ ಕೋರ್ಸ್​ ಅಡಿಯಲ್ಲಿ ಕಲಿಸಲಾಗುವುದು ಎಂದು ಡಾ. ಗಂಗೂಬಾಯಿ ಹಾನಗಲ್​ ಸಂಗೀತ ಮತ್ತು ಪ್ರದರ್ಶನ ವಿಶ್ವವಿದ್ಯಾನಿಲಯದ ಕುಲಪತಿ ಡಾ. ನಾಗೇಶ್​ ಬೆಟ್ಟಕೋಟೆ ತಿಳಿಸಿದ್ದಾರೆ.

ಅಖಿಲ ಕರ್ನಾಟಕ ಸುಗಮ ಸಂಗೀತ ಸಂಸ್ಥೆಗಳ ಒಕ್ಕೂಟ ಶನಿವಾರ ಎನ್​.ಆರ್​. ಕಾಲನಿಯ ಬಿಎಂಶ್ರೀ ಪ್ರತಿಷ್ಠಾನದಲ್ಲಿ ಆಯೋಜಿಸಿದ್ದ "ಹಾಡು ಹೊಸ ಹಾಡು' ಹಾಗೂ ಸುಗಮ ಸಂಗೀತ: ಪಠ್ಯಕ್ರಮದ ಕರಡನ್ನು ವಿಶ್ವವಿದ್ಯಾಲಯಕ್ಕೆ ಸಲ್ಲಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಆನಂದ ಮಾದಲಗೆರೆ ಮಾತನಾಡಿ, ಸುಗಮ ಸಂಗೀತಕ್ಕೆ ಪಠ್ಯ ಅಳವಡಿಸುವ ನಿಟ್ಟಿನಲ್ಲಿ ಒಕ್ಕೂಟವು ಕಳೆದ 8 ವರ್ಷಗಳಿಂದ ನಿರಂತರವಾಗಿ ಕಮ್ಮಟಗಳನ್ನು ಆಯೋಜಿಸಲಾಗುತ್ತಿದೆ. ಈ ವೇಳೆ ಕ್ಷೇತ್ರದ ಹಿರಿಯ ಕವಿಗಳು ಹಾಗೂ ಗಾಯಕರಿಂದ ಸಲಹೆಗಳನ್ನು ಪಡೆದು ಅಂತಿಮ ಕರಡನ್ನು ಸಿದ್ಧಪಡಿಸಲಾಗಿದೆ ಎಂದರು.

ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷೆ ಶುಭಾ ಧನಂಜಯ, ಸಂಸ್ಥೆಯ ಅಧ್ಯಕ್ಷ ಡಾ. ಕಾ.ವೆಂ. ಶ್ರೀನಿವಾಸಮೂರ್ತಿ ಇತರರಿದ್ದರು.