ಬೆಳ್ತಂಗಡಿ: ಬೆಳ್ತಂಗಡಿ ರೋಟರಿ ಕ್ಲಬ್, ಲಯನ್ಸ್ ಕ್ಲಬ್ ಆಶ್ರಯದಲ್ಲಿ ಭಾನುವಾರ ಬೆಳ್ತಂಗಡಿಯಲ್ಲಿ ರೋಟಾಲಯ ಸಂಗೀತ ಸ್ಪರ್ಧೆ ನಡೆಯಿತು.
ರೋಟರಿ ಜಿಲ್ಲಾ ಉಪ ಗವನರ್ ಡಾ.ಎ.ಜಯಕುಮಾರ್ ಶೆಟ್ಟಿ, ಲಯನ್ಸ್ ಕ್ಲಬ್ ರಾಜು ಶೆಟ್ಟಿ ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿದರು.
ದೇಶಭಕ್ತಿಗೀತೆ: ಸಮೂಹ ಗಾಯನ: ಉಜಿರೆ ಎಸ್‌ಡಿಎಂ ಆಂಗ್ಲ ಮಾಧ್ಯಮ ಶಾಲೆ(ಸಿಬಿಎಸ್‌ಸಿ) (ಪ್ರಥಮ), ಬೆಳ್ತಂಗಡಿ ಎಸ್‌ಡಿಎಂ ಆಂಗ್ಲ ಮಾಧ್ಯಮ ಶಾಲೆ(ದ್ವಿತೀಯ) ಸ್ಥಾನ ಪಡೆದುಕೊಂಡಿದ್ದಾರೆ.
ಭಾವಗೀತೆ: ಪ್ರಾಪ್ತಿ ಶೆಟ್ಟಿ, ಧರ್ಮಸ್ಥಳ ಎಸ್‌ಡಿಎಂ ಆಂಗ್ಲ ಮಾಧ್ಯಮ ಶಾಲೆ(ಪ್ರಥಮ), ಸ್ವಸ್ತಿಶ್ರೀ ಹೆಬ್ಬಾರ್ ಎಸ್‌ಡಿಎಂ, ಆಂಗ್ಲ ಮಾಧ್ಯಮ ಶಾಲೆ(ಸಿಬಿಎಸ್‌ಸಿ) ಉಜಿರೆ(ದ್ವಿತೀಯ) ಸ್ಥಾನ ಪಡೆದುಕೊಂಡಿದ್ದಾರೆ.
ದೇಶಭಕ್ತಿ ಸಮೂಹ ಗಾಯನ: ಧರ್ಮಸ್ಥಳ ಎಸ್‌ಡಿಎಂ ಕನ್ನಡ ಮಾಧ್ಯಮ ಪ್ರೌಢಶಾಲೆ(ಪ್ರಥಮ), ಪುಂಜಾಲಕಟ್ಟೆ ಕರ್ನಾಟಕ ಪಬ್ಲಿಕ್ ಸ್ಕೂಲ್(ದ್ವಿತೀಯ) ಸ್ಥಾನ ಪಡೆದುಕೊಂಡಿದ್ದಾರೆ.
ಎ. ವಿಭಾಗ: ಭಾವಗೀತೆ ಸ್ಪರ್ಧೆ: ಸನ್ನಿಧಿ, ಎಸ್‌ಡಿಎಂ ಆಂಗ್ಲ ಮಾಧ್ಯಮ ಶಾಲೆ(ಸಿಬಿಎಸ್ ಸಿ) ಉಜಿರೆ(ಪ್ರಥಮ), ಅಂಜಲಿ ಎಸ್‌ಡಿಎಂ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿ(ದ್ವಿತೀಯ) ಸ್ಥಾನ ಪಡೆದುಕೊಂಡಿದ್ದಾರೆ.
ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಪ್ರೊ.ಪ್ರಕಾಶ್ ಪ್ರಭು, ಗೀತಾ ಪ್ರಭು, ಕಾರ್ಯದರ್ಶಿ ಡಾ.ಎಂ.ಎಂ.ದಯಾಕರ್, ಲಯನ್ಸ್ ಕ್ಲಬ್ ಅಧ್ಯಕ್ಷ ಮುರಳಿ ಬಲಿಪ, ಕಾರ್ಯದರ್ಶಿ ಅಮಿತಾನಂದ ಹೆಗ್ಡೆ, ಲಿಯೊ ಕ್ಲಬ್ ಅಧ್ಯಕ್ಷರಾದ ಡಾ.ಭಾಷಿಣಿ, ಡಾ.ಶಶಿಕಾಂತ ಡೋಂಗ್ರೆ ಉಪಸ್ಥಿತರಿದ್ದರು. ಎಸ್‌ಡಿಎಂ ಪ್ರೌಢಶಾಲೆ ನಿವೃತ್ತ ಮುಖ್ಯ ಶಿಕ್ಷಕ ಉಜಿರೆಯ ಬಿ.ಜನಾರ್ದನ ತೋಳ್ಪಾಡಿತ್ತಾಯ, ಸುಬ್ರಹ್ಮಣ್ಯ, ಪ್ರಶಾಂತ ಬಾಳಿಗ ಬೆಳ್ತಂಗಡಿ, ಅಯ್ಯಪ್ಪ ಪ್ರಭು ಸಂಗೀತ ಸ್ಪರ್ಧೆ ತೀರ್ಪುಗಾರರಾಗಿದ್ದರು.