ಜಿಲ್ಲೆ

ಸಂಗೀತ ಮಹಾವಿದ್ಯಾಲಯದಲ್ಲಿ ಉಚಿತ ಆರೋಗ್ಯ ತಪಾಸಣ ಶಿಬಿರ

ಗದಗ: ಅತಿಯಾದ ಮೊಬೈಲ್ ಬಳಕೆ ಆರೋಗ್ಯಕ್ಕೆ ಹಾನಿಕರವಾಗಿದ್ದು ಯುವಕರು ಅತಿಯಾದ ಮೊಬೈಲ್ ಬಳಕೆಯ ಬಗ್ಗೆ ಎಚ್ಚರಗೊಳ್ಳಬೇಕೆಂದು ಡಾ. ಎ ಎಮ್ ಪಲ್ಲೇದ ಅವರು ಹೇಳಿದರು .

ಡಾ.ಪಿ ಜಿ ಎ ಎಸ್ ಸಮಿತಿಯ ಪಂಡಿತ್ ಪಂಚಾಕ್ಷರಿ ಗವಾಯಿಗಳವರ ಸಂಗೀತ ಮಹಾವಿದ್ಯಾಲಯ ಹಾಗೂ ಸಂಗೀತ ಸ್ನಾತಕೋತರ ಕೇಂದ್ರದಲ್ಲಿ ಆಯೋಜಿಸಲಾದ ಉಚಿತ ಆರೋಗ್ಯ ತಪಾಸಣಾ ಶಿಬಿರ ದಲ್ಲಿ ಸನ್ಮಾನ ಸ್ವೀಕರಿಸಿ ಅವರು ಅನೇಕ ವಿದ್ಯಾರ್ಥಿ ವಿದ್ಯಾರ್ಥಿನಿಯರ ಆರೋಗ್ಯ ತಪಾಸಣೆ ಗೈದು ಉಪಯುಕ್ತ ಸಲಹೆ ಸೂಚನೆಯನ್ನು ನೀಡಿದರು. 
ಶ್ರೀ ಎಸ್ ಎಂ ಗೌಡರ್ ಅವರು ಮಾತನಾಡಿ ಡಾ.ಎ ಎಮ್ ಪಲ್ಲೇದ ಅವರು ಸದಾ ಕೊಡಗೈದಾನಿಗಳಾಗಿದ್ದು ಅವರು, ಮಹಾವಿದ್ಯಾಲಯಕ್ಕೆ ಮೈಕ್ಸೆಟ್ ಅನ್ನು ದಾನವಾಗಿ ನೀಡಿ ವಿದ್ಯಾರ್ಥಿಗಳ ಅವಶ್ಯಕತೆಯನ್ನು ಪೂರೈಸಿದ್ದಾರೆ ಅವರಿಗೆ ಗುರು ಕುಮಾರ ಪಂಚಾಕ್ಷರ ಪುಟ್ಟರಾಜ ಶಿವಯೋಗಿಗಳು ಸುಖ ಸಂಪತ್ತನ್ನು ನೀಡಿ ಕಾಪಾಡಲೆಂದು ಅವರು ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಪ್ರಾಚಾರ್ಯ ಡಾ ಮೃತ್ಯುಂಜಯ ಶೆಟ್ಟರ್ ಅವರು ಮಾತನಾಡುತ್ತಾ ಎಲ್ಲಾ ಸಂಪತ್ತುಕಿಂತ ಆರೋಗ್ಯ ಸಂಪತ್ತು ದೊಡ್ಡದಾಗಿದ್ದು ವಿದ್ಯಾರ್ಥಿಗಳು ಆರೋಗ್ಯದ ಬಗ್ಗೆ ಲಕ್ಷ ವಹಿಸಿ ಉತ್ತಮ ಆರೋಗ್ಯವಂತರಾಗಬೇಕೆಂದು   ಅವರು ಹೇಳಿದರು.

ವೇದಿಕೆಯ ಮೇಲೆ ಡಾ ಸುಮಿತ್ರ ಹಿರೇಮಠ,  ಶ್ರೀಮತಿ ಮಹಾಲಕ್ಷ್ಮಿ ಹೆಗಡೆ ,ಡಾ ಎಸ್ ಎಸ್ ಗಡ್ಡದಮಠ  ಡಾ ಕೊಡಗಾನೂರು ಹನುಮಂತ್, ಡಾ, ವಿಶ್ವನಾಥ್ ಹಿರೇಮಠ, ವಾಯ್ . ಆರ. ಮೂಲಿಮನಿ, ಎಂ ಎಸ್ ಮಠದ,ವಿ ಎಂ ಪಟ್ಟದಕಲ್ ಹಾಗೂ ಕುಮಾರಿ ಯಶೋಧ ಮಾದರ್ ಉಪಸ್ಥಿತರಿದ್ದರು.

ಪ್ರಾರಂಭದಲ್ಲಿ ವಿದ್ಯಾರ್ಥಿನಿಯರಾದ ಕುಮಾರಿ ತ್ರಿವೇಣಿ, ಸಂಗೀತ ಡಿ ಎಂ, ರಂಜಿತಾ ಬಡಿಗೇರ್ ಯಶೋಧ ಮಾದರ್ ಪ್ರಾರ್ಥನೆ ಗೈದರು  ಇವರಿಗೆ ತಬ್ಲಾಸಾಥ ವಾಯ್ ಆರ್ ಮೂಲಿಮನಿ ಹಾರ್ಮೋನಿಯಂ ಸಾಥ್ ವಿ ಎಂ ಪಟ್ಟದಕಲ್   ನೀಡಿದರು. ಉಪನ್ಯಾಸಕ ಗಂಗಾಧರ ಹಿಡಿಕಿಮಠ ಸರ್ವರನ್ನು ಸ್ವಾಗತಿಸಿದರು  ಕೊನೆಗೆ  ಡಾ  ವಿಶ್ವನಾಥ್ ಹಿರೇಮಠ  ವಂದಿಸಿದರು .