ಸಿಂಧನೂರಿನ ಬ್ರಾಹ್ಮಣರ ಓಣಿಯಲ್ಲಿರುವ ಶ್ರೀ ರಾಮಮಂದಿರದ ಆವರಣದಲ್ಲಿ ಸಂಸ್ಕಾರ ಭಾರತಿಯಿಂದ ಸಂಗೀತ ಕಾರ್ಯಕ್ರಮ ನಡೆಯಿತು. 
ಜಿಲ್ಲೆ

ಸಂಗೀತದಿಂದ ಮನಸ್ಸಿಗೆ ನೆಮ್ಮದಿ

ನರೇಶ್ ಕುಮಾರ್

ಸಿಂಧನೂರು: ಸಂಗೀತ ಕೇಳುವುದರಿಂದ ಮನಸ್ಸು ಅರಳುತ್ತದೆ, ನೆಮ್ಮದಿಯೂ ಸಿಗುತ್ತದೆ. ಅಲ್ಲದೆ ಸಕಾರಾತ್ಮಕ ಆಲೋಚನೆಗಳಿಂದ ಬದುಕಲು ಸಾಧ್ಯವಾಗಲಿದೆ ಎಂದು ಹಿರಿಯ ಸಾಹಿತಿ, ಸಂಶೋಧಕ ಶಾಶ್ವತಸ್ವಾಮಿ ಮುಕ್ಕುಂದಿಮಠ ಹೇಳಿದರು.

ನಗರದ ಬ್ರಾಹ್ಮಣರ ಓಣಿಯಲ್ಲಿರುವ ಶ್ರೀ ರಾಮಮಂದಿರದ ಆವರಣದಲ್ಲಿ ಸಂಸ್ಕಾರ ಭಾರತಿ ಹಮ್ಮಿಕೊಂಡಿದ್ದ ಸಂಗೀತ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಂಗೀತಕ್ಕೆ ಒಂದು ಚೇತನ ಶಕ್ತಿ ಇದೆ. ಸಾಹಿತ್ಯ ಮತ್ತು ಸಂಗೀತ ಪರಸ್ಪರ ಸಂಬಂಧ ಇದೆ. ಸಂಗೀತದಲ್ಲಿ ಸಾಹಿತ್ಯ ಇರಬೇಕು. ಅಂದಾಗ ಅದಕ್ಕೆ ಮಾಧುರ್ಯ ಬರಲು ಸಾಧ್ಯ. ಶಿವ ಸ್ಮರಣೆ ಹೆಸರಿನಲ್ಲಿ ಸಂಗೀತದೌತಣ ಉಣ ಬಡಿಸಿರುವುದು ಒಳ್ಳೆಯದು ಎಂದರು. ಡಾ.ಎಸ್.ವಿ.ಪಾಟೀಲ್ ಮಾತನಾಡಿದರು. ಸಂಸ್ಕಾರ ಭಾರತಿ ಜಿಲ್ಲಾ ಉಪಾಧ್ಯಕ್ಷ ವೆಂಕಣ್ಣ ಮಾತನಾಡಿದರು.

ಬ್ರಾಹ್ಮಣ ಮಹಾಸಭಾ ರಾಜ್ಯ ಸಮಿತಿ ಸದಸ್ಯ ನರಸಿಂಹಾಚಾರ್, ರಾಮಕೃಷ್ಣ ಆಚಾರ್ಯ, ಸಾಮಾಜಿಕ ಕಾರ್ಯಕರ್ತ ಭೀಮಸೇನ ಜಾಗೀರದಾರ, ನಗರಸಭೆ ಸದಸ್ಯ ಚಂದ್ರಶೇಖರ ಮೈಲಾರ, ಬಸವ ಕೇಂದ್ರದ ಕಾರ್ಯದರ್ಶಿ ಬಸವರಾಜ ಹುಲಿಹೈದರ್, ರೌಡಕುಂದ ಶ್ರೀ ಲಕ್ಷ್ಮೀ ಬಂಡೆ ರಂಗನಾಥ ಪ್ರತಿಷ್ಠಾನದ ಅಧ್ಯಕ್ಷ ರಾಘವೇಂದ್ರರಾವ್ ಕುಲಕರ್ಣಿ, ಮಠದ ವಿಚಾರಣಾ ಕರ್ತ ರಾಘವೇಂದ್ರ ರಾವ್ ಕುಲಕರ್ಣಿ ಅವರನ್ನು ಸನ್ಮಾನಿಸಲಾಯಿತು. ಶ್ರೀರಾಮಮಂದಿರ ಅರ್ಚಕ ಸುಬ್ಬಶಾಸ್ತ್ರಿ, ನಗರ ಯುವ ಘಟಕದ ಕಾರ್ಯದರ್ಶಿ ಪ್ರಹ್ಲಾದ ಕುಲಕರ್ಣಿ, ಹನುಮಂತ ಆಚಾರ್ ಮಸ್ಕಿ ಇದ್ದರು.