ದೇವದುರ್ಗದಲ್ಲಿ ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿಗೆ ಜಯ ಕರ್ನಾಟಕ ಸಂಘ ಮನವಿ ಸಲ್ಲಿಸಿತು. ಗ್ರಾಮ ಘಟಕದ ಅಧ್ಯಕ್ಷ ಬಸವರಾಜ ನಾಯಕ, ಮುಖಂಡರಾದ ಚಂದಹುಸೇನ್, ಮುದುಕಪ್ಪ ಭೋವಿ, ಶ್ರೀಕಂಠಪ್ಪ ಪೂಜಾರಿ, ತಿಪ್ಪಣ್ಣ ಛಲವಾದಿ ಇದ್ದರು. 
ಜಿಲ್ಲೆ

ಕಳಪೆ ಕಾಮಗಾರಿಯಿಂದ ಜನರಿಗೆ ತೊಂದರೆ

ರುದ್ರಪ್ಪ ವಾಲಿ

ದೇವದುರ್ಗ: ತಾಲೂಕಿನ ಮುಷ್ಟೂರು ಗ್ರಾಮದ ಮುಖ್ಯರಸ್ತೆ ಹಾಗೂ ಒಳಚರಂಡಿ ಕಾಮಗಾರಿಯಲ್ಲಿ ಗುಣಮಟ್ಟತೆ ಕಾಪಾಡಲು ಒತ್ತಾಯಿಸಿ ಜಯಕರ್ನಾಟಕ ಸಂಘಟನೆಯ ಮುಷ್ಟೂರು ಗ್ರಾಮ ಘಟಕ ಪಟ್ಟಣದ ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿಗೆ ಗುರುವಾರ ಮನವಿ ಸಲ್ಲಿಸಿತು.

ಚರಂಡಿ ಕಾಮಗಾರಿ ಅವೈಜ್ಞಾನಿಕವಾಗಿ ಮಾಡಿದ್ದರಿಂದ ಮಗುಬಿದ್ದು ಅಸ್ವಸ್ಥ

ಮುಖ್ಯರಸ್ತೆ ಹಾಗೂ ಒಳಚರಂಡಿ ಕಾಮಗಾರಿ ಕಳಪೆಯಿಂದ ಕೂಡಿದೆ. ಅಲ್ಲದೆ ಸಮರ್ಪಕವಾಗಿ ಕೆಲಸ ಮಾಡದೆ ಅವೈಜ್ಞಾನಿಕವಾಗಿ ಕಾಮಗಾರಿ ಮಾಡಲಾಗುತ್ತಿದೆ. ಗುಣಮಟ್ಟದ ಕಾಮಗಾರಿ ಮಾಡುವಂತೆ ಗುತ್ತಿಗೆದಾರರಿಗೆ ಹಾಗೂ ಜೆಇ ಚಂದ್ರಕಾಂತಗೆ ಗ್ರಾಮಸ್ಥರು ದೂರು ನೀಡಿದರೂ ಗಮನಹರಿಸುತ್ತಿಲ್ಲ. ಚರಂಡಿ ಕಾಮಗಾರಿ ಅವೈಜ್ಞಾನಿಕವಾಗಿ ಮಾಡಿದ್ದರಿಂದ ಮಗುಬಿದ್ದು ಅಸ್ವಸ್ಥಗೊಂಡಿತ್ತು.

ಅರೆಬರೆ ಕಾಮಗಾರಿಯಿಂದ ಜನರ ಓಡಾಟ ಹಾಗೂ ವಾಹನಗಂಳ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಗುಣಮಟ್ಟದ ಕಾಮಗಾರಿ ನಿರ್ವಹಿಸುವಂತೆ ಗುತ್ತಿಗೆದಾರರು ಹಾಗೂ ಜೆಇಗೆ ಸೂಚನೆ ನೀಡಬೇಕು ಎಂದು ಒತ್ತಾಯಿಸಿದರು. ಮುಖಂಡರಾದ ರಂಗಪ್ಪ ನಾಯಕ, ಅಯ್ಯಣ್ಣ ನಾಯಕ ಇದ್ದರು.