ಹಗರಿಬೊಮ್ಮನಹಳ್ಳಿ ತಾಲೂಕಿನ ರಾಯರಾಳು ತಾಂಡಾದಲ್ಲಿ ತಿಪ್ಪೆಯಲ್ಲಿ ಬೆಳೆದ ಅಣಬೆ ತಿಂದು ಅಸ್ವಸ್ಥರಾಗಿದ್ದವರನ್ನು ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿರುವುದು. 
ಜಿಲ್ಲೆ

ಅಣಬೆ ಸೇವಿಸಿ ಒಂಬತ್ತು ಜನ ಅಸ್ವಸ್ಥ

ಹಗರಿಬೊಮ್ಮನಹಳ್ಳಿ: ತಾಲೂಕಿನ ರಾಯರಾಳು ತಾಂಡಾದಲ್ಲಿ ತಿಪ್ಪೆಯಲ್ಲಿ ಬೆಳೆದ ಅಣಬೆ ತಿಂದು ಮಂಗಳವಾರ ಒಂಬತ್ತು ಜನ ಅಸ್ವಸ್ಥರಾಗಿದ್ದರೆ.

ಗ್ರಾಮದ ಹೊರ ವಲಯದಲ್ಲಿ ಆಹಾರದ ಜತೆ ಅಣಬೆ ಪ್ರೈಮಾಡಿಕೊಂಡು ಏಳು ಜನ, ಇಬ್ಬರು ಮಕ್ಕಳು ಸೇವಿಸಿದ್ದರಿಂದ ವಾಂತಿಯಿಂದಾಗಿ ಅಸ್ವಸ್ಥಗೊಂಡಿದ್ದರು. ತಾಲೂಕಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ನೀಡಲಾಗಿತ್ತಿದೆ ಎಂದು ತಾಲೂಕು ವೈದ್ಯಾಧಿಕಾರಿ ಶಿವರಾಜ ತಿಳಿಸಿದರು.