ಹುಬ್ಬಳ್ಳಿ: ಇಲ್ಲಿಯ ಶ್ರೀ ಜಗದ್ಗುರು ಮೂರುಸಾವಿರ ಮಠ ಮಹಾಸಂಸ್ಥಾನದಲ್ಲಿ ಶ್ರಾವಣ ಮಾಸದ ನಿಮಿತ್ತ ಕರ್ತೃ ಶ್ರೀ ಜಗದ್ಗುರು ಗುರುಸಿದ್ದೇಶ್ವರ ಗದ್ದುಗೆಗೆ ನಿತ್ಯ ವಿಶೇಷ ಪೂಜೆ ಹಾಗೂ ಜಾತ್ರಾ ಮಹೋತ್ಸವ ಏರ್ಪಡಿಸಲಾಗಿದೆ.
ಶ್ರಾವಣ ಮಾಸದ ಜಾತ್ರಾ ಮಹೋತ್ಸವ ಅಂಗವಾಗಿ ಆ. 30ರಂದು ಸಂಜೆ 5.30ಕ್ಕೆ ಮಠದಿಂದ ಪ್ರಕಟಗೊಂಡ ಆರು ಗ್ರಂಥಗಳ ಲೋಕಾರ್ಪಣೆ ಮತ್ತು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಜಿಲ್ಲಾ, ತಾಲೂಕು ಘಟಕದ ಪದಾಧಿಕಾರಿಗಳ ಸನ್ಮಾನ ನಡೆಯಲಿದೆ.
ಶ್ರಾವಣ ಕೊನೇ ಸೋಮವಾರ ಸೆ. 2ರಂದು ಮಧ್ಯಾಹ್ನ 3.30ಕ್ಕೆ ಪಲ್ಲಕ್ಕಿ ಉತ್ಸವ, ಸಂಜೆ 5ಕ್ಕೆ ಕರ್ತೃ ಶ್ರೀ ಜಗದ್ಗುರು ಗುರುಸಿದ್ದೇಶ್ವರರ ರಥೋತ್ಸವ ಜರುಗಲಿದೆ. ಸಂಜೆ 7ಕ್ಕೆ ಶ್ರೀ ಜಗದ್ಗುರು ಡಾ. ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಶೂನ್ಯ ಸಿಂಹಾಸನಾರೋಹಣ ಕಾರ್ಯಕ್ರಮ ನಡೆಯಲಿದೆ. ಭಕ್ತರು ಪಾಲ್ಗೊಳ್ಳಬೇಕೆಂದು ಪ್ರಕಟಣೆ ಕೋರಿದೆ.