ಹುಬ್ಬಳ್ಳಿ: ವಿಜಯದಶಮಿಯಂದು ಪ್ರತಿ ವರ್ಷದ ಪದ್ಧತಿಯಂತೆ ಇಲ್ಲಿಯ ಮೂರುಸಾವಿರ ಮಠದ ಜಗದ್ಗುರು ಡಾ. ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಮೇಣೆ ಉತ್ಸವವು ಗುರುವಾರ ವಿಜೃಂಭಣೆಯಿಂದ ನಡೆಯಿತು.
ಸಾವಿರಾರು ಭಕ್ತರು ಬನ್ನಿ ಮುಡಿಯುವ ಮುಖಾಂತರ ಸ್ವಾಮೀಜಿಗಳ ಆಶೀರ್ವಾದ ಪಡೆದರು.
ಭೂಸ್ ಪೇಟೆಯ ಗಚ್ಚಿನ ಬಸವೇಶ್ವರ ದೇವಸ್ಥಾನದಿಂದ ಉತ್ಸವ ಹೊರಟು ದೇಸಾಯಿ ಓಣಿ, ಬಂಕಾಪುರ ಚೌಕ್, ಯಲ್ಲಾಪುರ ಓಣಿ ಮಾರ್ಗವಾಗಿ ಕರ್ಕಿ ಬಸವೇಶ್ವರ ದೇವಸ್ಥಾನದಲ್ಲಿ ಬಸವೇಶ್ವರ ಮೂರ್ತಿಗೆ ಬನ್ನಿ ಸಮರ್ಪಿಸುವ ಮೂಲಕ ಸಮಾರೋಪ ಗೊಂಡಿತು.
ಎರಡೆತ್ತಿನ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ, ರಾಯನಾಳ ವಿರಕ್ತಮಠದ ಶ್ರೀ ಅಭಿನವ ರೇವಣಸಿದ್ದೇಶ್ವರ ಸ್ವಾಮೀಜಿ, ಹಿರಿಯರಾದ ಜಿ.ಎಂ. ಚಿಕ್ಕಮಠ, ಹುಚ್ಚಪ್ಪ ರೂಗಿ, ಮಲ್ಲಿಕಾರ್ಜುನ ಕಳಸರಾಯ್, ಎ.ಬಿ. ಪಾಟೀಲ್, ಗಚ್ಚಿನ ಬಸವೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿಯ ಸದಸ್ಯರು ಮತ್ತು ಕರ್ಕಿ ಬಸವೇಶ್ವರ ದೇವಸ್ಥಾನ ಕಮಿಟಿಯ ಸದಸ್ಯರು ಹಾಜರಿದ್ದರು.