ಜಿಲ್ಲೆ

Murudeshwar ಸಮುದ್ರದಲ್ಲಿ ಮುಳುಗಿ ಬೆಂಗಳೂರು ಮೂಲದ ವಿದ್ಯಾರ್ಥಿ ಸಾವು: ಓರ್ವನ ರಕ್ಷಣೆ

Webdesk - Savina Naik

ಬೆಂಗಳೂರು: ಪ್ರವಾಸಕ್ಕೆ ಬಂದಿದ್ದ ಕಾಲೇಜು ವಿದ್ಯಾರ್ಥಿ ( Student ) ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ಭಟ್ಕಳ ತಾಲೂಕಿನ ಮುರುಡೇಶ್ವರ ಬೀಚ್‌ನಲ್ಲಿ ( Murudeshwar) ನಡೆದಿದೆ. ಈ ಘಟನೆಯ ಕುರಿತಾಗಿ ಮುರುಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

17 ವರ್ಷದ ಗೌತಮ್ ಮೃತ ವಿದ್ಯಾರ್ಥಿ.  ಧನುಶ್ .ಡಿ. ರಕ್ಷಣೆಗೊಳಗಾದ ವಿದ್ಯಾರ್ಥಿ. ಇವರಿಬ್ಬರು ಬೆಂಗಳೂರಿನ ನಿವಾಸಿಗಳು ಎಂದು ತಿಳಿದು ಬಂದಿದೆ.  ಸ್ನೇಹಿತರ ಜತೆ ಪ್ರವಾಸಕ್ಕೆ  ಬಂದು ಗೌತಮ್ ಪ್ರಾಣ ಕಳೆದುಕೊಂಡಿದ್ದಾನೆ.

ನಡೆದಿದ್ದೇನು?:

ಬೆಂಗಳೂರಿನಿಂದ ವಿದ್ಯಾ ಸೌಧ ಕಾಲೇಜಿನ 220 ವಿದ್ಯಾರ್ಥಿಗಳು ಪ್ರವಾಸಕ್ಕೆಂದು ಆಗಮಿಸಿದ್ದರು. ಈ ವೇಳೆ ಇಬ್ಬರು ವಿದ್ಯಾರ್ಥಿಗಳು ಸಮುದ್ರದ ಆಳದಲ್ಲಿ ಈಜಲು ತೆರಳಿದ್ದರು. ಅಲೆಗಳ ಅಬ್ಬರಕ್ಕೆ ಇಬ್ಬರು ನೀರಿನಲ್ಲಿ ಮುಳಿಗಿದ್ದು,  ಧನುಷ್​ನನ್ನು ನೋಡಿದ ಲೈಫ್ ಗಾರ್ಡ್​ ಹಾಗೂ ಪೊಲೀಸರು ಆತನನ್ನು ರಕ್ಷಣೆ ಮಾಡಿದ್ದರು.

ಗೌತಮ್ ಕೂಡ ಈಜಲು ಬಂದಿರುವ ಮಾಹಿತಿಯನ್ನ ಧನುಷ್ ಹೇಳದಿದ್ದರಿಂದ ಮಾಹಿತಿ ತಿಳಿಯದೇ ಓರ್ವನನ್ನು ಮಾತ್ರ ರಕ್ಷಣೆ ಮಾಡಲಾಗಿದೆ. ವಿದ್ಯಾರ್ಥಿ ಸಂಖ್ಯೆ ಎಣಿಸಿದಾಗ ಗೌತಮ್ ಕೂಡ ಸಮುದ್ರದಲ್ಲಿ ಈಜಲು ಹೋಗಿರುವುದು ಗಮನಕ್ಕೆ ಬಂದಿದೆ. ನಂತರ ಮುರುಡೇಶ್ವರ ಎ.ಸ್.ಐ ರುದ್ರೇಶ್, ಲೈಪ್ ಗಾರ್ಡ್​ ಹಾಗೂ ನೇತ್ರಾಣಿ ಅಡ್ವೆಂಚರ್ಸ ತಂಡ ಶೋಧ ನಡೆಸಿ ಶವವನ್ನು ಹೊರಕ್ಕೆ ತೆಗೆಯಲಾಗಿದೆ.