ಜಿಲ್ಲೆ

ಮುರ್ತುಜಾಗೆ ಸ್ವರ್ಣಸಿರಿ ಪ್ರಶಸ್ತಿ

ವೀರೇಶ ಸೌದ್ರಿ

ದಾಂಡೇಲಿ: ಹುಬ್ಬಳ್ಳಿಯ ಭಾವಸಂಗಮ ಸಂಸ್ಥೆ ಕೊಡಮಾಡುವ ಸ್ವರ್ಣಸಿರಿ ಪ್ರಶಸ್ತಿಗೆ ಜಿಲ್ಲಾ ಕಸಾಪ ಕೋಶಾಧ್ಯಕ್ಷ, ಹಿರಿಯ ನಾಟಕಕಾರ ಮುರ್ತುಜಾ ಹುಸೇನ್ ಆನೆಹೊಸೂರ ಭಾಜನರಾಗಿದ್ದಾರೆ.

ಮುರ್ತುಜಾ ಹುಸೇನ್ ಅವರು ಸಾಹಿತ್ಯಿಕ ಸಾಂಸ್ಕೃತಿಕ ಕಾರ್ಯ ಚಟುವಟಿಕೆಗಳಲ್ಲಿ ಸದಾ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈ ಹಿಂದೆ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಗೊಂಡಿರುವುದನ್ನು ಸ್ಮರಿಸಬಹುದು.