ಅಳವಂಡಿ: ಸಮೀಪದ ಮುರ್ಲಾಪುರಕ್ಕೆ ತಹಸೀಲ್ದಾರ್ ವಿಠ್ಠಲ ಚೌಗಲೆ, ತಾಲೂಕು ಪಂಚಾಯಿತಿ ಇಓ ದುಂಡಪ್ಪ ತುರಾದಿ ಇತರ ಅಧಿಕಾರಿಗಳು ಗುರುವಾರ ಭೇಟಿ ನೀಡಿ ಕುಡಿವ ನೀರು ಇತರ ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸಿದರು.
ಬಹು ಗ್ರಾಮ ಕುಡಿಯುವ ನೀರು ಯೋಜನೆಯಡಿ ಗ್ರಾಮಕ್ಕೆ ನೀರು ಪೂರೈಕೆಯಾಗುತ್ತಿಲ್ಲ. ಬೋರ್‌ವೆಲ್‌ನಿಂದ ಬಿಡುವ ನೀರನ್ನು ಸಂಗ್ರಹಿಸಲು ಟ್ಯಾಂಕ್ ಇಲ್ಲ. ನೀರಗಂಟಿ ನೇಮಕ ಮಾಡಿಲ್ಲ. ಇದರಿಂದ ಗ್ರಾಮಕ್ಕೆ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ ಎಂದು ಗ್ರಾಮಸ್ಥರು ದೂರಿದರು.
ನಂತರ ಶಾಲಾ ಕಾಂಪೌಂಡ್ ಹಾಗೂ ಅದರ ಜಾಗದ ಬೆಗೆಗಿನ ತಕರಾರರು, ಚರಂಡಿ ಮತ್ತು ಜಮೀನುಗಳಿಗೆ ತೆರಳುವ ದಾರಿ ಸಮಸ್ಯೆ ಕುರಿತು ಗ್ರಾಮಸ್ಥರು ಮಾಹಿತಿ ನೀಡಿದರು.
ತಹಸೀಲ್ದಾರ್ ವಿಠಲ ಔಗಲೆ ಮಾತನಾಡಿ, ಒಎಚ್‌ಟಿ ಟ್ಯಾಂಕ್ ಕಾಮಗಾರಿ ಶೀಘ್ರ ಮುಗಿಸಿ ಗ್ರಾಮಸ್ಥರಿಗೆ ಸಮಪರ್ಕ ನೀರೊದಗಿಸುವಂತೆ ಜೆಜೆಎಂ ಅಧಿಕಾರಿಗಳಿಗೆ ಸೂಚಿಸಿದ ಅವರು, ಎಲ್ಲ ಸಮಸ್ಯೆಗಳನ್ನು ಶೀಘ್ರವೇ ಇತ್ಯರ್ಥಪಡಿಸುವುದಾಗಿ ತಿಳಿಸಿದರು.
ಕಂದಾಯ ನಿರೀಕ್ಷಕ ಸುರೇಶ, ಎಇಇ ವಿಲಾಸ ಭೋಸ್ಲೆ, ಗ್ರಾಮ ಆಡಳಿತಾಧಿಕಾರಿ ಮಲ್ಲಮ್ಮ, ಪಿಡಿಒ ರತ್ನಮ್ಮ ಇತರರಿದ್ದರು.