ಕಾರವಾರ: ಕಳೆದ ಎರಡು ವಾರಗಳಿಂದ ಪ್ರವಾಸಿಗರಿಗೆ ನಿರ್ಬಂಧವಿರುವ Murdeshwara beach ನ್ನು ಮತ್ತೆ ಓಂದೆರಡು ದಿನದಲ್ಲಿ ತೆರೆಯುವ ಸಾಧ್ಯತೆಗಳಿವೆ.
ಡಿಸೆಂಬರ್ ಮೊದಲ ವಾರ ಶೈಕ್ಷಣಿಕ ಪ್ರವಾಸಕ್ಕೆ ಬಂದ ಕೋಲಾರ ಜಿಲ್ಲೆಯ ಮುರಾರ್ಜಿ ವಸತಿ ಶಾಲೆಯ ನಾಲ್ವರು ವಿದ್ಯಾರ್ಥಿನಿಯರು ಮುರ್ಡೇಶ್ವರ ಕಡಲಲ್ಲಿ ಮುಳುಗಿ ಮೃತಪಟ್ಟಿದ್ದರು. ನಂತರ ಕಡಲ ತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ ವಿಽಸಲಾಗಿದೆ. ಕ್ರಿಸ್‌ಮಸ್ ಹಾಗೂ ವರ್ಷಾಂತ್ಯಕ್ಕೆ ಮುರ್ಡೇಶ್ವರ ಕಡಲ ತೀರದಲ್ಲಿ ಪ್ರವಾಸಿಗರಿಗೆ ಅವಕಾಶ ನೀಡಬಹುದು ಎಂಬ ಪ್ರವಾಸೋದ್ಯಮಿಗಳ ನಿರೀಕ್ಷೆ ಹುಸಿಯಾಗಿದೆ. ಪ್ರವಾಸಿಗರ ಸುರಕ್ಷತೆಯ ಬಗ್ಗೆ ಕೆಲವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವವರೆಗೆ ಪ್ರವಾಸಿಗರಿಗೆ ತೀರವನ್ನು ಮುಕ್ತ ಮಾಡುವುದುದಿಲ್ಲ ಎಂದು ಭಟ್ಕಳ ಉಪವಿಭಾಗಾಽಕಾರಿಗಳು ಸ್ಪಷ್ಟಪಡಿಸಿದ್ದಾರೆ. ಮುರ್ಡೇಶ್ವಕ್ಕೆ ಈಗಾಗಲೇ ಸಾವಿರಾರು ಪ್ರವಾಸಿಗರು ಬರುತ್ತಿದ್ದು, ತೀರವನ್ನು ದೂರದಿಂದ ನೋಡಿ ವಾಪಸಾಗುತ್ತಿದ್ದಾರೆ.