ಜಿಲ್ಲೆ

ಎಮ್ಮೆ ಮೇಯಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಕೊಲೆ!

ಸೋಮಲಿಂಗ ತಳವಾರ

ಚಿಕ್ಕೋಡಿ: ಹೊಲದಲ್ಲಿ ಎಮ್ಮೆ ಮೇಯಿಸಿರುವುದನ್ನು ಪ್ರಶ್ನಿಸಿದ್ದರಿಂದ ಸಿಟ್ಟಿಗೆದ್ದ ಎಮ್ಮೆ ಮಾಲೀಕ ವೃದ್ಧರೊಬ್ಬರನ್ನು ಕೊಲೆ ಮಾಡಿರುವ ಟನೆ ತಾಲೂಕಿನ ಮಾಂಗನೂರ ಗ್ರಾಮದಲ್ಲಿ ಭಾನುವಾರ ನಡೆದಿದೆ. ಭೀಮಗೌಡ ರಾಮಗೌಡ ಪಾಟೀಲ (70) ಕೊಲೆಯಾದ ವ್ಯಕ್ತಿ. ಅದೇ ಗ್ರಾಮದ ನಾಗಪ್ಪ ಲಕ್ಷ$್ಮಣ ಖೋತ ಮತ್ತು ಬಾಳಪ್ಪ ನಾಗಪ್ಪ ಖೋತ ಕೊಲೆ ಆರೋಪಿಗಳಾಗಿದ್ದಾರೆ.

ಮೃತ ಭೀಮಗೌಡ ಪಾಟೀಲನ ಪಕ್ಕದ ಜಮೀನಿನ ರೈತರಾದ ಆರೋಪಿತರು ತಮ್ಮ ದನಗಳನ್ನು ಕೊಲೆಯಾದ ಭೀಮಗೌಡ ಅವರ ಜಮೀನಿನ ಬದುವಿನಲ್ಲಿ ಮೇಯಿಸಿರುವುದನ್ನು ಪುತ್ರ ಕಲಗೌಡ ಪ್ರಶ್ನಿಸಿದ್ದ. ಇದರಿಂದ ಸಿಟ್ಟಿಗೆದ್ದ ಆರೋಪಿತರು ಆತನ ಮೇಲೆ ಹಲ್ಲೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಜಗಳ ಬಿಡಿಸಲು ಬಂದ ವೃದ್ಧ ಭೀಮಗೌಡನನ್ನು ಬಲವಾಗಿ ತಳ್ಳಿದರಿಂದ ಅವರು ಗಾಯಗೊಂಡು ಮೃತಪಟ್ಟಿದ್ದಾರೆ.

ಈ ಕುರಿತು ಚಿಕ್ಕೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.