ದೀಪಕ್ ಬೆಂಗರ 
ಜಿಲ್ಲೆ

ಕೊಲೆ ಪ್ರಕರಣ ಶಂಕಿತ ಆರೋಪಿ ವಶ

ಸೌಮ್ಯ ಆರ್

ಉಪ್ಪಿನಂಗಡಿ: ಬಸ್‌ನಿಲ್ದಾಣ ಬಳಿಯ ಗ್ರಾಪಂ ಸ್ವಾಮ್ಯದ ನಿರ್ಮಾಣ ಹಂತದ ಕಟ್ಟಡದಲ್ಲಿ ಅಸ್ಸಾಂ ಮೂಲದ ಕಾರ್ಮಿಕ ದೀಪಕ್ ಬೆಂಗರ(34) ಎಂಬಾತನನ್ನು ಕೊಲೆಗೈದ ಪ್ರಕರಣದ ಶಂಕಿತ ಆರೋಪಿ, ಪೆರ್ನೆ ಸಮೀಪದ ನಿವಾಸಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಹಲವಾರು ಕಳವು ಪ್ರಕರಣಗಳಲ್ಲಿ ಶಾಮೀಲಾಗಿದ್ದ ಆರೋಪಿ ಡಿ.3ರಂದು ರಾತ್ರಿ ಬಸ್ ನಿಲ್ದಾಣ ಪರಿಸರದಲ್ಲಿ ಅಲೆಯುತ್ತಿದ್ದ ವೇಳೆ ಗಸ್ತು ನಿರತ ಪೊಲೀಸರಿಂದ ತಪ್ಪಿಸಿಕೊಳ್ಳುವ ಸಲುವಾಗಿ ಕಟ್ಟಡ ಪ್ರವೇಶಿಸಿ ಅಲ್ಲಿ ಮಲಗಲು ಮುಂದಾಗಿದ್ದನು. ಆ ವೇಳೆಗಾಗಲೇ ಅಲ್ಲಿ ಮಲಗಿದ್ದ ದೀಪಕ್ ಎಚ್ಚರಗೊಂಡು ಆತನಿಗೆ ಅಲ್ಲಿ ಮಲಗಲು ಅವಕಾಶವಿಲ್ಲವೆಂದು ಬೆದರಿಸಿದ್ದನು. ಅಲ್ಲಿಂದ ಮತ್ತೆ ಬಸ್ ನಿಲ್ದಾಣಕ್ಕೆ ಬಂದಿದ್ದ ಆರೋಪಿ ತನ್ನ ಪ್ಯಾಂಟ್ ಜೇಬಿನಲ್ಲಿದ್ದ ಹಣ, ಮೊಬೈಲ್ ಕಣ್ಮರೆಯಾಗಿರುವುದನ್ನು ಕಂಡು, ಅಲ್ಲಿ ಮಲಗಿರುವ ದೀಪಕ್ ಕದ್ದಿರಬಹುದೆಂದು ಶಂಕಿಸಿ ಆತನ ತಲೆಗೆ ದೊಣ್ಣೆಯಿಂದ ಹೊಡೆದು ಕೊಲೆಗೈದಿರುವ ಮಾಹಿತಿ ಲಭಿಸಿದೆ. ಪೊಲೀಸರು ಬಸ್ ನಿಲ್ದಾಣ ಪರಿಸರದ ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಆರೋಪಿಯ ಚಲನವಲನ ಪತ್ತೆಯಾಗಿತ್ತು.