Vector illustration in HD very easy to make edits. 
ಜಿಲ್ಲೆ

ಇಸ್ಪೀಟ್, ಕುಡಿತದ ದಾಸನಾಗಿದ್ದ ಪತಿಯಿಂದ ಪತ್ನಿಯ ಹತ್ಯೆ

ಸದೇಶ್ ಕಾರ್ಮಾಡ್

ಮೈಸೂರು: ಕೌಟುಂಬಿಕ ಕಲಹ ವಿಕೋಪಕ್ಕೆ ತಿರುಗಿ ನಗರದ ಸರ್ದಾರ್ ವಲ್ಲಭಭಾಯ್ ಪಟೇಲ್ ನಗರದಲ್ಲಿ ಮಂಗಳವಾರ ಪತಿ ಪತ್ನಿಯನ್ನು ಹತ್ಯೆಗೈದಿದ್ದಾನೆ.

ನಗರದ ಆಲನಹಳ್ಳಿ ನಿವಾಸಿ ಶಿಲ್ಪ(26) ಹತ್ಯೆಗೀಡಾದ ಗೃಹಿಣಿ. ಈಕೆ ಚಾಮರಾಜನಗರ ತಾಲೂಕು ಸಂತೆಮರಹಳ್ಳಿ ಸಮೀಪದ ನವಿಲೂರು ಗ್ರಾಮದ ಮಹೇಶ್ ಎಂಬಾತನನ್ನು ವಿವಾಹವಾಗಿದ್ದು, ದಂಪತಿಗೆ 6 ಮತ್ತು 4 ವರ್ಷದ ಇಬ್ಬರು ಮಕ್ಕಳಿದ್ದಾರೆ. ಪ್ರಾರಂಭದಲ್ಲಿ ಕೌಟುಂಬಿಕ ಜೀವನ ಉತ್ತಮವಾಗಿತ್ತು. ಆದರೆ, ನಂತರ ಮಹೇಶ್ ಇಸ್ಪೀಟ್ ಮತ್ತು ಕುಡಿತದ ದಾಸನಾಗಿ ಸಾಲ ಮಾಡಿಕೊಂಡ್ದಿದ್ದ. ಈ ವಿಚಾರವಾಗಿ ದಂಪತಿ ನಡುವೆ ಆಗಿಂದಾಗೆ ಕಲಹ ಪ್ರಾರಂಭವಾಯಿತು.

ಪತಿ ಮಹೇಶ್ ವರ್ತನೆಯಿಂದ ರೋಸಿ ಹೋದ ಶಿಲ್ಪ ಆಲನಹಳ್ಳಿನಲ್ಲಿರುವ ತಾಯಿ ಮನೆಗೆ ಬಂದು ನೆಲೆಸಿದ್ದರು. ಇದರಿಂದ ಮತ್ತಷ್ಟು ಕುಪಿತನಾಗಿ ಪತಿ ಮಹೇಶ್ ಆಲನಹಳ್ಳಿಯ ಅತ್ತೆ ಮನೆಯಲ್ಲೇ ಉಳಿದುಕೊಂಡಿದ್ದ. ಸೋಮವಾರ ರಾತ್ರಿ ಇಬ್ಬರ ನಡುವೆ ಜಗಳ ನಡೆದಿದ್ದು, ಮಂಗಳವಾರ ಬೆಳಗ್ಗೆ ಮಹೇಶ್ ಮಚ್ಚಿನಿಂದ ಶಿಲ್ಪ ಮೇಲೆ ಹಲ್ಲೆ ನಡೆಸಿ ಹತ್ಯೆಗೈದಿದ್ದಾನೆ. ಘಟನೆ ಬಳಿಕ ಆರೋಪಿ ತಲೆಮರೆಸಿಕೊಂಡಿದ್ದಾನೆ. ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.