ಚಿಕ್ಕಬಳ್ಳಾಪುರ: ತಾಲೂಕಿನ ದೊಡ್ಡಹಳ್ಳಿಯಲ್ಲಿ ಪಾರ್ಟಿಗೆ ಯುವಕನನ್ನು ಕರೆಸಿಕೊಂಡು ಕೊಲೆ ಮಾಡಿದ ಪ್ರಕರಣ ಸಂಬಂಧ ಐವರನ್ನು ವಶಪಡಿಸಿಕೊಳ್ಳಲಾಗಿದೆ.ಗ್ರಾಮದ ನರಸಿಂಹಮೂರ್ತಿ (28) ಮೃತ. ಈತನ ಸಂಬಂಧಿ ಸುರೇಶ್ ಸೇರಿ ಐವರನ್ನು ಬಂಧಿಸಲಾಗಿದೆ. ಜಮೀನಿನ ವಿವಾದ, ಕೌಟುಂಬಿಕ ದ್ವೇಷದ ಹಿನ್ನೆಲೆಯಲ್ಲಿ ಗಲಾಟೆ ನಡೆಯುತ್ತಿತ್ತು. ನರಸಿಂಹಮೂರ್ತಿ ಕುಟುಂಬದ ಸದಸ್ಯರಿಗೆ ಪ್ರಾಣ ಬೆದರಿಕೆಯನ್ನೊಡ್ಡಲಾಗಿತ್ತು. ಮಿತ್ರ ಬಳಗವು ಟ್ರಾ$್ಯಕ್ಟರ್ ಖರೀದಿಸಿದ ಖುಷಿಯಲ್ಲಿ ಪಾರ್ಟಿ ಮಾಡಲಾಗುತ್ತಿದೆ ಎಂದು ಹೇಳಿ ತೋಟದ ಮನೆಗೆ ಕರೆಸಿಕೊಂಡಿದ್ದಾರೆ. ಬಾಡೂಟ, ಮದ್ಯ ಸೇವನೆಯ ಸಂದರ್ಭದಲ್ಲಿ ಸುರೇಶ್ ಮಚ್ಚಿನಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿದರಿಂದ್ದ ಸ್ಥಳದಲ್ಲಿಯೇ ನರಸಿಂಹಮೂರ್ತಿ ಮೃತಪಟ್ಟಿದ್ದಾನೆ. ಇದರಿಂದ ಭಯಗೊಂಡು ಸ್ಥಳದಲ್ಲಿದ್ದ ಗೆಳೆಯರ ಗುಂಪು ಪರಾರಿಯಾಗಿದೆ. ಇದೇ ವೇಳೆ ಮೃತನ ಸಹೋದರ ರಾಜೇಶ್ನ ಮೇಲೆ ಹಲ್ಲೆಯಾಗುತ್ತಿದ್ದಂತೆ ಸ್ಥಳದಿಂದ ಪಾರಾಗಿ ಪ್ರಾಣ ಉಳಿಸಿಕೊಂಡು ಠಾಣೆಗೆ ದೂರು ನೀಡಿದ್ದಾನೆ. ಪೆರೇಸಂದ್ರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.