ಜಿಲ್ಲೆ

ಕುಡಿದ ಅಮಲಿನಲ್ಲಿ ತಾಯಿ ನಿಂದಿಸಿದವನ ಕೊಲೆ

ಉಡುಪಿ: ಕುಡಿದ ಅಮಲಿನಲ್ಲಿ ಮೂವರ ಮಧ್ಯೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ಗುರುವಾರ ಸಂಜೆ ಇಂದ್ರಾಳಿ ರೈಲ್ವೇ ನಿಲ್ದಾಣ ಸಮೀಪ ನಡೆದಿದೆ.

ತಮಿಳುನಾಡು ಮೂಲದ ಕುಮಾರ್ (32) ಕೊಲೆಯಾದ ವ್ಯಕ್ತಿ. ಗೆಳೆಯರಾದ ನವೀನ್ ಮತ್ತು ಕುಟ್ಟಿ ಆರೋಪಿಗಳು.

ಕುಟ್ಟಿ ಮತ್ತು ನವೀನ್ ಇಂದ್ರಾಳಿ ಬಾರ್‌ನಲ್ಲಿ ಮದ್ಯಪಾನ ಮಾಡಿ ನಡೆದುಕೊಂಡು ಬರುತ್ತಿದ್ದಾಗ ಕುಮಾರ್ ತಡೆದು ನಿಲ್ಲಿಸಿ ಜಗಳವಾಡಿದ್ದು, ಕುಡಿದ ಅಮಲಿನಲ್ಲಿ ತಾಯಿಗೆ ಅವಾಚ್ಯ ಶಬ್ದಗಳಿಂದ ಬೈದಿದ್ದಾನೆ. ಈ ಸಂದರ್ಭದಲ್ಲಿ ಮೂವರ ನಡುವೆ ಮಾತಿಗೆ ಮಾತು ಬೆಳೆದು ನವೀನ್ ಮತ್ತು ಕುಟ್ಟಿ ಸೇರಿ ಮರದ ತುಂಡಿನಿಂದ ಕುಮಾರನ ತಲೆಗೆ ಹೊಡೆದಿದ್ದಾರೆ. ಇದರಿಂದ ಆತ ಸ್ಥಳದಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾನೆ. ಸ್ಥಳಕ್ಕೆ ನಗರ ಠಾಣೆ ಪೊಲೀಸರು ಭೇಟಿ ನೀಡಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ.