ಜಗಳೂರು: ತಾಲೂಕಿನ ಗೌರಿಪುರ ಗ್ರಾಮದ ಶಿಕ್ಷಕಿ ನಾಗಮ್ಮ (50) ಅವರನ್ನು ಗಂಡ ಸತ್ಯಪ್ಪ ಹರಿತವಾದ ಆಯುಧದಿಂದ ಕತ್ತು ಸೀಳಿ ಕೊಲೆ ಮಾಡಿ, ತಾನೂ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬುಧವಾರ ಬೆಳಗ್ಗೆ ನಡೆದಿದೆ.
ಪತ್ನಿಯ ಶೀಲ ಶಂಕಿಸಿ ಆಗಾಗ ಜಗಳವಾಡುತ್ತಿದ್ದ ಸತ್ಯಪ್ಪ ಮಂಗಳವಾರ ರಾತ್ರಿ ಮತ್ತೆ ಜಗಳವಾಡಿದ್ದಾನೆ. ಜಗಳ ಬೆಳಗಿನವರೆಗೂ ನಡೆದು ಬುಧವಾರ ಬೆಳಗ್ಗೆ ಹರಿತವಾತ ಆಯುಧದಿಂದ ಪತ್ನಿಯ ಕತ್ತು ಸೀಳಿ ಕೊಲೆ ಮಾಡಿದ್ದಾನೆ. ನಂತರ, ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿ ಇದೀಗ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ.
28 ವರ್ಷಗಳ ಹಿಂದೆ ಗೌರಿಪುರ ಗ್ರಾಮದ ಸತ್ಯಪ್ಪ ನಾಗಮ್ಮ ಅವರನ್ನು ವಿವಾಹವಾಗಿದ್ದರು. ವಿವಾಹವಾಗಿ 10 ವರ್ಷಗಳ ನಂತರ ಕೊಲೆ ಆರೋಪಿ ಸತ್ಯಪ್ಪ ತನ್ನ ಪತ್ನಿ ನಾಗಮ್ಮಳ ಮೇಲೆ ವಿನಾಕಾರಣ ಅನುಮಾನ ಪಡುವುದು, ಹಣಕ್ಕಾಗಿ ಪೀಡಿಸುತ್ತಿದ್ದ ಎಂದು ದೂರಿನಲ್ಲಿ ನಾಗಮ್ಮ ಸಹೋದರಿ ಶಾಂತಮ್ಮ ಉಲ್ಲೇಖಿಸಿ ಜಗಳೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.