ಜಿಲ್ಲೆ

ದುಷ್ಕರ್ಮಿಗಳಿಂದ ಕೊಲೆ

ಎಸ್.ಎರ್ರಿಸ್ವಾಮಿ

ಬಳ್ಳಾರಿ : ನಗರದ ಕಣೇಕಲ್ ರಸ್ತೆಯ ಕಾಟನ್ ಮಿಲ್ ಬಳಿ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಗುರುವಾರ ಮಧ್ಯರಾತ್ರಿ ನಡೆದಿದೆ. ನಗರದ ರಾಣಿತೋಟ ನಿವಾಸಿ ವೆಂಕಟೇಶ್(39)ಮೃತ. ಗುರುವಾರ ರಾತ್ರಿ 12 ಗಂಟೆ ಸುಮಾರಿಗೆ ಮೂರ್ನಾಲ್ಕು ದುಷ್ಕರ್ಮಿಗಳು ವೆಂಕಟೇಶನ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ. ಈ ಕುರಿತು ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಈ ಕುರಿತು ಬ್ರೂಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.