ಜಿಲ್ಲೆ

ಮಹಿಳೆಯ ಶವ ಪತ್ತೆ ಕೊಲೆ ಶಂಕೆ

Uttara Kannada - Subash Hegde

ಕಾರವಾರ: ಆಗಸ್ಟ್ ತಿಂಗಳಲ್ಲಿ ಕಾಣೆಯಾದ ಮಹಿಳೆಯೊಬ್ಬಳ ಶವ ಅಣಶಿ ಅರಣ್ಯದಲ್ಲಿ ಪತ್ತೆಯಾಗಿದೆ. ಕೊಲೆಯ ಶಂಕೆ ಇದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಪರ್ವಿನ್ ಬೇಗಂ (45) ಮೃತ ಮಹಿಳೆ. ಆಕೆಯ ಪತಿ ಇಸ್ಮಾಯಿಲ್ ದಫೇದಾರ್ ಇನ್ನೊಬ್ಬನ ಜತೆ ಸೇರಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಚಿತ್ತಾಕುಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರವಾರದ ಹಳಗಾದ ಪಾರ್ಶ್ವವಾಯು ಆಸ್ಪತ್ರೆಗೆ ಚಿಕಿತ್ಸೆ ಪಡೆಯುವ ಸಲುವಾಗಿ ಪತ್ನಿ ಪರ್ವಿನ್ ಬೇಗಂ ಜತೆಗೆ ಆಗಸ್ಟ್ 29 ರಂದು ಇಸ್ಮಾಯಿಲ್ ದಫೇದಾರ್ ಬಂದಿದ್ದ ಎನ್ನಲಾಗಿದೆ. ಚಿಕಿತ್ಸೆ ಪಡೆದು ವಾಪಸ್ ಹೋಗುವಾಗ ಫರ್ವೀನ್ ಕಾಣೆಯಾಗಿರುವುದಾಗಿ ಆತ ಊರಿಗೆ ಹೋಗಿ ಹೇಳಿದ್ದ. ಸೆಪ್ಟೆಂಬರ್ 1 ರಂದು ಮಹಿಳೆಯ ಸಹೋದರ ಮುಸ್ತಪಾ ಸೈಫುದ್ದೀನ್ ಚಿತ್ತಾಕುಲಾ ಠಾಣೆಗೆ ಆಗಮಿಸಿ ತನ್ನ ಸಹೋದರಿ ಕಾಣೆಯಾಗಿರುವುದಾಗಿ ದೂರು ನೀಡಿದ್ದ. ಗುರುವಾರ ಸಾಯಂಕಾಲ ಕದ್ರಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಅಣಶಿ ಘಟ್ಟದ ಸಮೀಪ ಮಹಿಳೆಯ ಶವ ಪತ್ತೆಯಾಗಿದೆ. ಮರಣೋತ್ತರ ಪರೀಕ್ಷೆಗೆ ಶವವನ್ನು ಕೊಂಡೊಯ್ಯಲಾಗಿದೆ.

ಕೊಲೆಯ ಶಂಕೆ:

ಪ್ರಾಥಮಿಕ ತನಿಖೆ ನಡೆಸಿದ ಪೊಲೀಸರಿಗೆ ಪತಿಯೇ ಪತ್ನಿಗೆ ಊಟದಲ್ಲಿ ವಿಷ ಉಳಿಸಿ, ಇನ್ನೊಬ್ಬನ ಕೊಲೆ ಮಾಡಿ ಕಾಡಿನಲ್ಲಿ ಎಸೆದು ಹೋದ ಶಂಕೆ ವ್ಯಕ್ತವಾಗಿದೆ. ತನಿಖೆ ಮುಂದುವರಿದಿದ್ದು, ಪತಿಯನ್ನು ವಶಕ್ಕೆ ಪಡೆದು ತನಿಖೆ ನಡೆಸುವ ಪ್ರಕ್ರಿಯೆ ಕೈಗೊಳ್ಳಲಾಗಿದೆ.