ಮುರಗೋಡ: ಇಲ್ಲಿನ ಮಾದರಿ ಶಾಲೆಗೆ ಸವದತ್ತಿ ಬಿಇಒ ಮೋಹನ ದಂಡಿನ ಬುಧವಾರ ಭೇಟಿ ನೀಡಿ ಪರಿಶೀಲಿಸಿ, ಹಳೇ ಶಾಲೆಯನ್ನು ತಕ್ಷಣದಿಂದಲೇ ತೆರವು ಕಾರ್ಯಾಚರಣೆ ನಡೆಸಬೇಕು ಎಂದು ಸೂಚಿಸಿದರು.
ಜೂನ್ 28ರಂದು ರಾಜ್ಯದ ನಂ. 1 ದಿನಪತ್ರಿಕೆ ವಿಜಯವಾಣಿಯಲ್ಲಿ "ಹಾಳುಕೂಂಪೆಯಾದ ಮುರಗೋಡ ಶಾಲೆ' ಎಂಬ ಶೀರ್ಷಿಕೆಯಡಿ ವಿಸತ ವರದಿ ಪ್ರಕಟಿಸಿತ್ತು. ಇದರಿಂದ ಎಚ್ಚೆತ್ತ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ, ಕಳೆದ ಮೂರ್ನಾಲ್ಕು ವರ್ಷಗಳ ಹಿಂದೆ ಕಟ್ಟಡ ತೆರವು ಆಗಬೇಕಿತ್ತು ಅನಿವಾರ್ಯ ಕಾರಣಕ್ಕಾಗಿ ತಡವಾಗಿದೆ.
ಜು.5ರಂದು ಹಳೆ ಶಾಲೆಯ ಕಲ್ಲು, ಮಣ್ಣು, ಕಟ್ಟಿಗೆ, ಕಬ್ಬಿನ, ಮರಗಳು ಸೇರಿ ಇತರ ಸಾಮಗ್ರಿಗಳನ್ನು ಹರಾಜು ಮಾಡಲು ಡಂಗೂರ ಸಾರಲಾತ್ತಿದೆ. 15&20 ದಿನಗಳಲ್ಲಿ ಸ್ವಚ್ಛಗೂಳಿಸಿ ಉತ್ತಮ ಆಟದ ಮೈದಾನ ನಿರ್ಮಿಸಲಾಗುವುದು. ಶ್ರೀದಲ್ಲಿ ಹಳೆ ವಿದ್ಯಾರ್ಥಿಗಳ ಸಹಕಾರದಿಂದ ಶತಮಾನೋತ್ಸವ ಆಚರಿಸೋಣ ಎಂದರು.ಎಸ್ಡಿಎಂಸಿ ಅಧ್ಯ ಅನೀಲ ಮಾತಾಡಿ, ಗ್ರಾಪಂ ಅಧ್ಯೆ ಸಂಕೇತಾ ಹಟ್ಟಿಹೊಳಿ, ಸಿಆರ್ಪಿ ಎಸ್.ಎಸ್. ಮಲ್ಲಣ್ಣವರ ಇತರರಿದ್ದರು.