ಜಿಲ್ಲೆ

ಬೈಕ್ ಅಪಘಾತದಿಂದ ಪಾದಾಚಾರಿಗೆ ಗಾಯ

Mangaluru - Nishantha Narayana

ಪುತ್ತೂರು: ಕಬಕ ಗ್ರಾಮದ ಮುರ ಜಂಕ್ಷನ್ ನಲ್ಲಿ ಪಾದಾಚಾರಿಯೊಬ್ಬರಿಗೆ ನಿರ್ಲಕ್ಷ್ಯದಿಂದ ಬೈಕ್ ಚಲಾಯಿಸಿ ಡಿಕ್ಕಿ ಹೊಡೆದಿದ್ದು, ರಸ್ತೆಗೆಬಿದ್ದು ಗಾಯಾಳು ಮಂಗಳೂರು ಆಸ್ಪತ್ರೆಯಲ್ಲಿ ಚೆಕಿತ್ಸೆ ಪಡೆಯುತ್ತಿದ್ದಾರೆ.

ಪಾದಾಚಾರಿ ಅಬ್ದುಲ್ ಖಾದರ್ (70) ಎಂಬವರಿಗೆ ಗಾಯವಾಗಿದೆ. ಆ.25ರ ರಾತ್ರಿ ಗಗನ್ ಎಂಬವರು ಚಲಾಯಿಸಿಕೊಂಡು ಬಂದ ದ್ವಿಚಕ್ರ ವಾಹನ ಅಬ್ದುಲ್ ಖಾದರ್ ಅವರಿಗೆ ಡಿಕ್ಕಿಯಾಗಿದೆ. ರಸ್ತೆಗೆ ಬಿದ್ದು ಗಾಯಗೊಂಡಿದ್ದು, ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಈ ಬಗ್ಗೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.