ಜಿಲ್ಲೆ

ಮುನಿಸ್ವಾಮಿ ಆರೋಪಕ್ಕೆ ಖಂಡನೆ

ಅವಿನಾಶ್ ಜೈನಹಳ್ಳಿ

ಕೋಲಾರ ಸಂಸದ ಮುನಿಸ್ವಾಮಿ ಅವರು ಶಾಸಕ ತನ್ವೀರ್‌ಸೇಠ್ ಉಗ್ರಗಾಮಿ ಸಂಘಟನೆಯ ಮುಖ್ಯಸ್ಥ ಎಂದು ಟೀಕಿಸಿರುವುದನ್ನು ನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ವಕ್ತಾರ ಎಸ್.ರಾಜೇಶ್ ಖಂಡಿಸಿದ್ದಾರೆ.


ಸಂಸದ ಮುನಿಸ್ವಾಮಿ ತಮ್ಮ ಹೇಳಿಕೆಯನ್ನು ವಾಪಸ್ ಪಡೆಯಬೇಕು. ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಮುಖಂಡರು ವೃಥಾ ಆರೋಪ ಮಾಡುವುದನ್ನು ನಿಲ್ಲಿಸಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದೆಂದು ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.


ಮುಖಂಡರಾದ ರಸೂಲ್, ಎಸ್.ಎ.ರಹೀಮ್, ಮರಿದೇವಯ್ಯ, ಕುರುಬಾರಹಳ್ಳಿ ಪ್ರಕಾಶ್ ಹಾಜರಿದ್ದರು.