ಮುದಗಲ್‌ನಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಯುಪಿಐ ಸ್ಕಾೃನರ್‌ಗಳನ್ನು ವಿತರಿಸಲಾಯಿತು. ಮುಖ್ಯಾಧಿಕಾರಿ ಎಂ.ನಬಿ ಕಂದಗಲ್ ಎಸ್‌ಜೆಆರ್ ವೈ ಸಮೂಹ ಸಂಯೋಜನಾಧಿಕಾರಿ ಚನ್ನಮ್ಮ ದಳವಾಯಿಮಠ, ಪ್ರಮುಖರಾದ ರೇಣುಕಾ, ದೀಪಾ, ಪುರಸಭೆ ಸಿಬ್ಬಂದಿ ಆರೀಫ್ ಬೇಗಂ ಇನ್ನಿತರರಿದ್ದರು. 
ಜಿಲ್ಲೆ

ನಗದು ರಹಿತ ವಹಿವಾಟು ಮಾಡಿ

ಮುದಗಲ್: ಬೀದಿ ಬದಿ ವ್ಯಾಪಾರಿಗಳು ಸರ್ಕಾರದ ವಿವಿಧ ಯೋಜನೆಯಡಿಯಲ್ಲಿ ದೊರೆಯುವ ಸಾಲ ಸೌಲಭ್ಯ ಪಡೆದುಕೊಂಡು ಮರುಪಾವತಿಯೊಂದಿಗೆ ಅಭಿವೃದ್ಧಿ ಹೊಂದಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಎಂ.ನಬಿ ಕಂದಗಲ್ ಹೇಳಿದರು.
ಸ್ಥಳಿಯ ಪುರಸಭೆ ಕಚೇರಿಯಲ್ಲಿ ಡೇ -ನಲ್ಮ್ ಯೋಜನೆಯಡಿ ಪ್ರಧಾನ ಮಂತ್ರಿ ಬೀದಿ ಬದಿ ವ್ಯಾಪಾರಿಗಳ ಸಾಮಾಜಿಕ ಹಾಗೂ ಆರ್ಥಿಕ ಸಮೀಕ್ಷೆಯಡಿ ಸಮೃದ್ಧಿ ಮೇಳ ಹಾಗೂ ಮೈ ಭೀಮ್ ಡಿಜಿಟಲ್ ಅಭಿಯಾನಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು. ಬ್ಯಾಂಕ್ ಖಾತೆಯೊಂದಿಗೆ ನಗದು ರಹಿತವಾಗಿ ವ್ಯಾಪಾರ ಮಾಡಿದಾಗ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಸರ್ಕಾರ ಡಿಜಿಟಲ್ ಅಭಿಯಾನ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.