ಮಸ್ಕಿ ತಹಸೀಲ್ದಾರ್ ಅರಮನೆ ಸುಧಾ ಅವರಿಗೆ ವಿವಿಧ ಗ್ರಾಮಸ್ಥರು ಮನವಿ ಸಲ್ಲಿಸಿದರು. ಪ್ರಮುಖರಾದ ಬಸವರಾಜ ಗುತ್ತೆದಾರ, ಮಾಳಪ್ಪ , ಶ್ರೀನಿವಾಸ ಹೂವಿನಬಾವಿ, ದೇವೆಂದ್ರಪ್ಪ , ಮೌನೇಶ, ದುರುಗಪ್ಪ, ಅಶೋಕ, ಬಸವರಾಜ ಚಿಲ್ಕರಾಗಿ, ವೀರಭದ್ರಪ್ಪ ಪೂಜಾರಿ ಇತರರಿದ್ದರು. 
ಜಿಲ್ಲೆ

ಪುರಸಭೆ ಅವೈಜ್ಞಾನಿಕ ಕ್ರಮಕ್ಕೆ ಆಕ್ರೋಶ

ರುದ್ರಪ್ಪ ವಾಲಿ

ಮಸ್ಕಿ: ಪುರಸಭೆಯ ಆಡಳಿತ ಮಂಡಳಿ ತಾಲೂಕಿನ ಹೂವಿನಬಾವಿ ಬಳಿ ತ್ಯಾಜ್ಯ ವಿಲೇವಾರಿ ಘಟಕ ಘಟಕ ಸ್ಥಾಪನೆಗೆ ಮುಂದಾಗಿದ್ದನ್ನು ವಿರೋಧಿಸಿ ವಿವಿಧ ಗ್ರಾಮಸ್ಥರು ಸೋಮವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಅರಮನೆ ಸುಧಾ ಅವರಿಗೆ ಮನವಿ ಸ್ಲಲಿಸಿದರು.

ಗ್ರಾಮಸ್ಥ ನಾಗರಡ್ಡೆಪ್ಪ ದೇವರಮನಿ ಮಾತನಾಡಿ, ಗ್ರಾಮದ ಬಳಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸುವುದರಿಂದ ಪರಿಸರ ಹಾಳಾಗಲಿದ್ದು, ಗ್ರಾಮಸ್ಥರ ಆರೋಗ್ಯದೆ ಮೇಲೂ ದುಷ್ಪರಿಣಾಮ ಬೀರಲಿದೆ.

ಮಸ್ಕಿಯಿಂದ 12 ಕೀಮೀ ದೂರದಲ್ಲಿ ಘಟಕ ಸ್ಥಾಪಿಸಲು ಮುಂದಾಗಿರುವುದು ಅವೈಜ್ಞಾನಿಕವಾಗಿದೆ. ಘಟಕ ಸ್ಥಾಪನೆ ಕೈಬಿಡದಿದಲ್ಲಿ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು. ಹೂವಿನಬಾವಿ, ಬುದ್ದಿನ್ನಿ ಎಸ್, ಬಸಾಪುರ, ಮುದಬಾಳ, ಬೆಂಚಮರಡಿ, ಇಲಾಲಪುರ, ಹರ್ವಾಪುರ, ತುಪ್ಪದೂರು ಗ್ರಾಮಸ್ಥರು ಇದ್ದರು.