ಬ್ಯಾಡಗಿ: ಸ್ಥಳೀಯ ಪುರಸಭೆಯ ಅಧ್ಯಕ್ಷೆಯಾಗಿ ಕವಿತಾ ಕೊಟ್ರಯ್ಯ ಸೊಪ್ಪಿನಮಠ ಹಾಗೂ ಉಪಾಧ್ಯಕ್ಷೆಯಾಗಿ ಕಲಾವತಿ ಮೌನೇಶ ಬಡಿಗೇರ ಅವಿರೋಧವಾಗಿ ಆಯ್ಕೆಯಾದರು.
ಶುಕ್ರವಾರ ನಿಗದಿಯಾಗಿದ್ದ ಚುನಾವಣೆಯಲ್ಲಿ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಕವಿತಾ ಕೊಟ್ರಯ್ಯ ಸೊಪ್ಪಿನಮಠ ಹಾಗೂ ಅ ವರ್ಗದ ಮಹಿಳೆಗೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಕಲಾವತಿ ಮೌನೇಶ ಬಡಿಗೇರ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಹೀಗಾಗಿ ಚುನಾವಣಾಧಿಕಾರಿ ತಹಸೀಲ್ದಾರ್ ರವಿ ಕೊರವರ ಅವಿರೋಧ ಆಯ್ಕೆ ಘೊಷಿಸಿದರು.
ಪುರಸಭೆಯಲ್ಲಿ ಬಿಜೆಪಿ 17 ಸದಸ್ಯರು, ಕಾಂಗ್ರೆಸ್ 6 ಸದಸ್ಯರಿದ್ದು, ಬಿಜೆಪಿಗೆ ಸ್ಟಷ್ಟ ಬಹುಮತ ಇದ್ದುದರಿಂದ ಅಧ್ಯಕ್ಷ, ಉಪಾಧ್ಯಕ್ಷ ಎರಡೂ ಸ್ಥಾನಗಳು ಬಿಜೆಪಿ ಪಾಲಾದವು.
ಬಿಜೆಪಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆದಿತ್ತು. ನ. 5ರಂದು ಜರುಗಿದ ಕೋರ ಕಮಿಟಿ ಹಾಗೂ ಸದ್ಯಸ್ಯರ ಸಭೆಯಲ್ಲಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಮಾಜಿ ಶಾಸಕ ಸುರೇಶಗೌಡ್ರ ಪಾಟೀಲ ಸೇರಿದಂತೆ ಹಿರಿಯ ಮುಖಂಡರ ಸಮ್ಮುಖದಲ್ಲಿ ಎರಡು ಸ್ಥಾನಗಳಿಗೆ ಅಭ್ಯರ್ಥಿ ಆಯ್ಕೆ ಮಾಡಲಾಗಿತ್ತು.
ಅಧ್ಯಕ್ಷೆ, ಉಪಾಧ್ಯಕ್ಷೆ ಆಯ್ಕೆ ಕುರಿತು ಇಬ್ಬರ ಹೆಸರನ್ನು ಘೊಷಿಸುತ್ತಿದ್ದಂತೆ ಪುರಸಭೆ ಹೊರಭಾಗದಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಬಳಿಕ ಮಹಿಳಾ ಸದಸ್ಯರು ಹಾಗೂ ಕಾರ್ಯಕರ್ತರು ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದರು.
ಪುರಸಭೆ ಸದಸ್ಯರಾದ ಬಾಲಚಂದ್ರಗೌಡ್ರ ಪಾಟೀಲ, ಬಸವರಾಜ ಛತ್ರದ, ರಾಮಣ್ಣ ಕೋಡಿಹಳ್ಳಿ, ಪಕ್ಕೀರಮ್ಮ ಚಲವಾದಿ, ವಿನಯ ಹಿರೇಮಠ, ಈರಣ್ಣ ಬಣಕಾರ, ಚಂದ್ರಪ್ಪ ಶೆಟ್ಟರ, ಸರೋಜ ಉಳ್ಳಾಗಡ್ಡಿ, ಶಿವರಾಜ ಅಂಗಡಿ, ಸುಭಾಸ ಮಾಳಗಿ, ಗಾಯತ್ರಿ ರಾಯ್ಕರ, ಗಂಗಮ್ಮ ಪಾಟೀಲ, ಮಂಜಣ್ಣ ರ್ಬಾ, ಸಂಜೀವ ಮಡಿವಾಳರ, ಇತರರಿದ್ದರು.