ಜಿಲ್ಲೆ

ಮುಂಡೂರು ಶ್ರೀ ನಾಗಕಲ್ಲುರ್ಟಿ ದೈವಸ್ಥಾನ ಕಾಲಾವಧಿ ನೇಮೋತ್ಸವ

ಸೌಮ್ಯ ಆರ್

ಬೆಳ್ತಂಗಡಿ: ದ.ಕ. ಜಿಲ್ಲೆಯ ಕಾರಣಿಕ ಕ್ಷೇತ್ರಗಳಲ್ಲಿ ಒಂದಾದ ಮುಂಡೂರು ಗ್ರಾಮದ ಮಂಗಳಗಿರಿ ಶ್ರೀನಾಗಕಲ್ಲುರ್ಟಿ ದೇವಸ್ಥಾನದಲ್ಲಿ ಶ್ರೀ ವರಾಹಿ ಮಂತ್ರಮೂರ್ತಿ, ನಾಗಕಲ್ಲುರ್ಟಿ, ಸತ್ಯದೇವತೆ ಹಾಗೂ ಕೊರಗಜ್ಜ, ಶ್ರೀ ಗುಳಿಗ ದೈವಗಳ ಕಾಲಾವಧಿ ನೇಮೋತ್ಸವವು ಆಡಳಿತ ಮೊಕ್ತೇಸರ ರಾಜೀವ ಮಾರ್ಗದರ್ಶನದಲ್ಲಿ ನಡೆಯಿತು.

ಬೆಳಗ್ಗೆ ರುದ್ರಯಾಗ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಮಹಾಪೂಜೆ, ಸಂಜೆ ಶ್ರೀದೇವಿ ನಾಗಾಂಬಿಕಾ ಅಮ್ಮನವರ ಉತ್ಸವ ಬಲಿ ನಡೆಯಿತು. ಬಳಿಕ ಶ್ರೀ ನಾಗಾಂಬಿಕಾ ಭಜನಾ ಮಂಡಳಿಯವರಿಂದ ಕುಣಿತ ಭಜನಾ ಕಾರ್ಯಕ್ರಮ, ರಾತ್ರಿ 7ಕ್ಕೆ ನಾಗಾಂಬಿಕಾ ಅಮ್ಮನವರ ಬಲಿ ಉತ್ಸವ, ದೈವಗಳ ಭಂಡಾರ ಇಳಿಯುವುದು, ದೈವಗಳು ಹಾಗೂ ಶ್ರೀ ನಾಗಾಂಬಿಕಾ ಅಮ್ಮನವರ ಭೇಟಿ, ಸಾರ್ವಜನಿಕ ಅನ್ನಪ್ರಸಾದ, ರಾತ್ರಿ ಶ್ರೀ ವರಾಹಿ ಮಂತ್ರಮೂರ್ತಿ, ನಾಗಕಲ್ಲುರ್ಟಿ, ಸತ್ಯದೇವತೆ ನೇಮೋತ್ಸವ ಬಳಿಕ ರಾತ್ರಿ 1 ಗಂಟೆಗೆ ಕೊರಗಜ್ಜ ಕೋಲ, ಮುಂಜಾನೆ ಶ್ರೀ ಗುಳಿಗ ದೈವದ ಕೋಲ ನಡೆಯಿತು.

ಆಡಳಿತ ಮೊಕ್ತೇಸರ ರಾಜೀವ, ಶ್ರೀ ನಾಗಾಂಬಿಕಾ ಭಜನಾ ಮಂಡಳಿ ಅಧ್ಯಕ್ಷ ಸಂತೋಷ್ ಕುಮಾರ್, ಕಾರ್ಯದರ್ಶಿ ಜಯರಾಜ್ ಬಂಗೇರ, ಉಪಾಧ್ಯಕ್ಷ ಪ್ರಶಾಂತ್ ಆಚಾರ್ಯ, ಜತೆ ಕಾರ್ಯದರ್ಶಿ ಪ್ರಶಾಂತ್ ಶೆಟ್ಟಿ, ಮಂಗಳ ಸ್ವಸಹಾಯ ತಂಡದ ಸಂತೋಷ್, ಜಯರಾಜ್, ಪ್ರದೀಪ್, ಗುಣಕರ ಕೋಟ್ಯಾನ್, ಸರೋಜ, ಅನೋಜ್, ಪುಷ್ಪಾವತಿ, ಹರೀಶ್ ಹಾಗೂ ಸದಸ್ಯರು ಸಹಕರಿಸಿದರು.