18ಎಂಎನ್‌ಡಿ1.ಪೋಟೋ. ಮುಂಡಗೋಡ ತಹಸೀಲ್ದಾರ್ ಕಚೇರಿ.
ಹೇಳಿಕೆ: ಕಂದಾಯ ಇಲಾಖೆಯ ಸಿಬ್ಬಂದಿಗಳು ಏನೆ ಸಮಸ್ಯಗಳಿದ್ದರು ತಮ್ಮ ಹಿರಿಯ ಅಧಿಕಾರಿಗಳಿಗೆ ತಿಳಿಸಿ ಬಗೆ ಹರಿಸಿಕೊಳ್ಳಬೇಕು ಅದು ಬಿಟ್ಟು ಕಾನೂನು ಕೈಗೆ ತೆಗೆದು ಕೊಳ್ಳುವುದು ಯಾರಿಗೂ ಅಧಿಕಾರವಿಲ್ಲ ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಜರುಗಿಸಲು ಎಸಿ ಹಾಗೂ ತಹಸೀಲ್ದಾರ್‌ಗೆ ಸೂಚಿಸುತ್ತೆನೆ.ಶಿವರಾಮ ಹೆಬ್ಬಾರ.ಶಾಸಕ.
ಹಿರಿಯ ಅಧಿಕಾರಿ ಹಾಗೂ ವಯಸ್ಸಿನಲ್ಲಿಯೂ ತುಂಬಾ ಹಿರಿಯರಾಗಿರುವ ಉಪತಹಸೀ ಲ್ದಾರ್ ಮೇಲೆ ಹಲ್ಲೆ ಮಾಡಿರುವುದು ಎಷ್ಟು ಸರಿ ಈ ಕುರಿತು ಹಿರಿಯ ಅಧಿಕಾರಿಗಳು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಜರುಗಿಸುವುದು ಅವಶ್ಯವಿದೆ.
ಜಗಳವಾದ ವಿಷಯ ತಿಳಿದ ತಕ್ಷಣ ಸುದ್ದಿಗಾರರು ತಹಸೀಲ್ದಾರ್ ಕಚೇರಿಗೆ ತೆರಳಿ ಈ ಬಗ್ಗೆ ಕಂದಾಯ ನೀರಿಕ್ಷಕ ವಿಕ್ರಮಸಿಂಗ್ ಅವರನ್ನು ಕೇಳಿದಾಗ ಅದೂ ನಮ್ಮಿಬ್ಬರ ವಯಕ್ತಿಕ ಜಗಳ ನಿಮಗ್ಯಾಕೆ ಬೇಕು ಎಂದು ದರ್ಪದಿಂದಲೆ ಉತ್ತರಿಸಿದರು. ವಯಕ್ತಿಕ ಜಗಳವಾಗಿದ್ದರೆ ಕಚೇರಿಯಿಂದ ಹೊರಗೆ ಮಾಡಿಕೊಳ್ಳಿ ಒಳಗಡೆ ಕೆಲಸದ ಸಮಯದಲ್ಲಿ ಯಾಕೆ ಹೊಡೆದಾಟ ಮಾಡಿಕೊಂಡಿದ್ದು ಎಂದು ಕೇಳಿದಾಗ ಮರು ಮಾತನಾಡದೆ ಕಚೇರಿಯಿಂದ ಹೊರ ನಡೆದರು. ಇವರ ವಯಕ್ತಿಕ ಜಗಳವಾಗಿದ್ದರೆ ಸಾರ್ವಜನಿಕರ ಎದುರು ಕಚೇರಿಯ ಸಮಯದಲ್ಲಿ ಹೊಡೆದಾಡುವುದು ಎಷ್ಟು ಸರಿ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಕಂದಾಯ ನೀರಿಕ್ಷಕ ವಿಕ್ರಮಸಿಂಗ್ ರಜಪೂತ ಹಾಗೂ ಉಪತಹಸೀಲ್ದಾರ್ ಜಿ.ಬಿ.ಭಟ್ ಎಂಬವರೆ ಹೊಡೆದಾಟ ಮಾಡಿಕೊಂಡ ಅಧಿಕಾರಿಗಳಾಗಿದ್ದಾರೆ. ಕಂದಾಯ ಇಲಾಖೆ ಯಿಂದ ಹಲವು ಬಗೆಯ ಪ್ರಮಾಣ ಪತ್ರಗಳನ್ನು ಸಾರ್ವಜನಿಕರಿಗೆ ನೀಡಲಾಗುತ್ತದೆ ಈ ಪ್ರಮಾಣ ಪತ್ರಗಳ ವಿತರಣೆಗೂ ಮುನ್ನ ಗ್ರಾಮ ಆಡಳಿತ ಅಧಿಕಾರಿ ಹಾಗೂ ಕಂದಾಯ ನೀರಿಕ್ಷಕರು ದಾಖಲೆಗಳ ಪರಿಶೀಲಿಸಿ ವರದಿ ಬರೆದು ತಹಸೀಲ್ದಾರ್ ಕಚೇರಿಗೆ ಕಳುಹಿಸ ಬೇಕು. ಆದರೆ ಕೆಲವು ಬಾರಿ ಕಂದಾಯ ನೀರಿಕ್ಷಕ ವಿಕ್ರಮಸಿಂಗ್ ರಜಪೂತ್ ಸರಿಯಾಗಿ ಪರಿಶೀಲನಾ ವರದಿ ನೀಡುತ್ತಿಲ್ಲ ಎನ್ನಲಾಗಿದೆ ಈ ಕುರಿತು ಉಪತಹಸೀಲ್ದಾರ್ ಜಿ.ಬಿ.ಭಟ್ಟ ಕಂದಾಯ ನೀರಿಕ್ಷಕನಿಗೆ ಪೊನ್ ಕರೆ ಮಾಡಿ ವರದಿಯನ್ನು ಸರಿಯಾಗಿ ನೀಡುತ್ತಿಲ್ಲ ಯಾಕೆ? ಎಂದು ಕೇಳಿದ್ದಾರೆ ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಇಬ್ಬರು ಅವಾಚ್ಯವಾಗಿ ಬೈದಾಡಿಕೊಂಡಿದ್ದಾರೆ.ನAತರ ತಹಸೀಲ್ದಾರ್ ಕಚೇರಿಗೆ ಬಂದ ಕಂದಾಯ ನೀರಿಕ್ಷಕ ವಿಕ್ರಮಸಿಂಗ್ ಉಪತಹಸೀಲ್ದಾರ್ ಜಿ.ಬಿ.ಭಟ್‌ಗೆ ಹೊಡೆದಿದ್ದಾನೆ ಈ ವೇಳೆ ಜಿ.ಬಿ.ಭಟ್ ಸಹ ಕಂದಾಯ ನೀರಿಕ್ಷಕನಿಗೆ ಮರಳಿ ಹೊಡೆದಿದ್ದಾನೆ. ಕಚೇರಿಯಲ್ಲಿದ್ದ ಸಾರ್ವಜನಿಕರು ಹಾಗೂ ಸಿಬ್ಬಂದಿಗಳು ಜಗಳ ಬಿಡಿಸಿದ್ದಾರೆ. ಕಂದಾಯ ಇಲಾಖೆಯ ಇಬ್ಬರ ಅಧಿಕಾರಿಗಳ ಹೊಡೆದಾಟದ ಮಾಡಿಕೊಂಡ ನಂತರ ಕಚೇರಿಯ ಕೆಲ ಸಿಬ್ಬಂದಿಗಳು ಇಬ್ಬರನ್ನು ಕರೆದು ರಾಜಿಸಂಧಾನ ಮಾಡಲು ಪ್ರಯತ್ನ ನಡೆಸಿರುವುದು ಕಂಡು ಬಂದಿತು.
moremoreಮುಂಡಗೋಡ: ಕ್ಷುಲ್ಲಕ ಕಾರಣಕ್ಕೆ ಕಂದಾಯ ನೀರಿಕ್ಷಕ ವಿಕ್ರಮಸಿಂಗ್ ರಜಪೂತ ಎಂಬವನು ಉಪತಹಸೀಲ್ದಾರ್ ಜಿ.ಬಿ.ಭಟ್ ಎಂಬವರ ಮೇಲೆ ಹಲ್ಲೆ ನಡೆಸಿದ ಘಟನೆ ಮಂಗಳವಾರ ಬೆಳಗ್ಗೆ ತಹಸೀಲ್ದಾರ್ ಕಚೇರಿಯಲ್ಲಿ ಸಾರ್ವಜನಿಕರ ಎದುರು ಜರುಗಿದೆ.