ಜಿಲ್ಲೆ

ಜಗದ್ಗುರು ಅನ್ನದಾನೀಶ್ವರ ಪಿಯು ಕಾಲೇಜಿಗೆ ಸಮಗ್ರ ಪ್ರಶಸ್ತಿ

ಮುಂಡರಗಿ: ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಪ್ರೌಢಶಾಲೆ ಮೈದಾನದಲ್ಲಿ ಆ. 25 ಮತ್ತು 26ರಂದು ನಡೆದ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಸ್ಥಳೀಯ ಜಗದ್ಗುರು ಅನ್ನದಾನೀಶ್ವರ ಪಪೂ ಕಾಲೇಜು ಸಮಗ್ರ ಪ್ರಶಸ್ತಿ ಪಡೆದಿದೆ.
ಬಾಲಕರ ವೈಯಕ್ತಿಕ ವಿಭಾಗ: ಶಿವರಾಜ ಕಿನ್ನಾಳ 800 ಮೀ.ಓಟ ಪ್ರಥಮ, ವಿಕಾಸ ಅಳವಂಡಿ 800 ಮೀ. ಓಟ ದ್ವಿತೀಯ, ವಿಜಯ ಬಾರಕೇರ ಗುಡ್ಡಗಾಡು ಓಟ ಪ್ರಥಮ, 5,000 ಮೀ. ಓಟ, 200ಮೀ.ಓಟ (ಪ್ರಥಮ), ಕಾರ್ತಿಕ ಹಿರೇಗೌಡ್ರ 3,000 ಮೀ. ಓಟದಲ್ಲಿ ಹಾಗೂ ಗುಡ್ಡಗಾಡು ಓಟ ದ್ವಿತೀಯ, ಫಕೀರೇಶ ಎಚ್. 1,500 ಮೀ. ಓಟ ತೃತೀಯ, ನಾಗರಾಜ ಬಾರಕೇರ ಗುಂಡು ಎಸೆತ ಹಾಗೂ ಚಕ್ರ ಎಸೆತ ಪ್ರಥಮ, ರೆಹೆಮಾನ ಕತೀಬ್ ಚಕ್ರ ಎಸೆತ ದ್ವಿತೀಯ, ಅನಿಲ ಲಮಾಣಿ ಭಲ್ಲೆ ಎಸೆತ ಪ್ರಥಮ, ಕಿರಣ ಲಮಾಣಿ ಎತ್ತರ ಜಿಗಿತದ್ವಿತೀಯ, ಆಕಾಶ ಗದ್ದಿ ಉದ್ದ ಜಿಗಿತ ತೃತೀಯ ಸ್ಥಾನ ಪಡೆದಿದ್ದಾರೆ.
ಬಾಲಕರ ಗುಂಪು ಆಟಗಳ ವಿಭಾಗ: ವಾಲಿಬಾಲ್ ಪ್ರಥಮ, ಕಬಡ್ಡಿ ಪ್ರಥಮ, ಟೆನಿಕ್ವಾಯಿಟ್ ಪ್ರಥಮ, ಶಟಲ್ ಪ್ರಥಮ ಸ್ಥಾನ ಪಡೆದಿದ್ದಾರೆ.
ಬಾಲಕಿಯರ ವೈಯಕ್ತಿಕ ವಿಭಾಗ: ಯಶೋಧಾ ಮೆಣಸಗಿ 400 ಮೀ. ಓಟ, 800 ಮೀ ಓಟ ಪ್ರಥಮ, ಪವಿತ್ರ ರಘುನಾಥನಹಳ್ಳಿ ಗುಂಡು ಎಸೆತ, ಚಕ್ರ ಎಸೆತ ಹಾಗೂ ಭಲ್ಲೆ ಎಸೆತ ಪ್ರಥಮ, ಭುವನೇಶ್ವರಿ ತಳವಾರ ಸರಪಳಿ ಗುಂಡು ಎಸೆತ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಬಾಲಕಿಯರ ಗುಂಪು ಆಟಗಳ ವಿಭಾಗ: ವಾಲಿಬಾಲ್ ಪ್ರಥಮ, ಟೆನಿಕ್ವಾಯಿಟ್ ಪ್ರಥಮ, ಶಟಲ್ ಪ್ರಥಮ ಹಾಗೂ ಕಬಡ್ಡಿ ದ್ವಿತೀಯ ಸ್ಥಾನ ಪಡೆದರು.
ಬಾಲಕರ ವಿಭಾಗದಲ್ಲಿ 3 ವೈಯಕ್ತಿಕ ಕ್ರೀಡೆಗಳಲ್ಲಿ ಪ್ರಥಮ ಸ್ಥಾನ ಪಡೆದ ವಿಜಯ ಬಾರಕೇರ ‘ವೀರ ಕೇಸರಿ’ ಪ್ರಶಸ್ತಿ, ಬಾಲಕಿಯರ ವಿಭಾಗದಲ್ಲಿ 3 ವೈಯಕ್ತಿಕ ಕ್ರೀಡೆಗಳಲ್ಲಿ ಪ್ರಥಮ ಸ್ಥಾನ ಗಳಿಸಿದ ಪವಿತ್ರ ರಘುನಾಥನಹಳ್ಳಿ ‘ವೀರಾಗ್ರಣಿ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.