ಜಿಲ್ಲೆ

ಮುಂಡಾಲ ವೇದಿಕೆ ಮಹಿಳಾ ಘಟಕ ಆಟಿಡೊಂಜಿ ಆಯನ

ಮಂಗಳೂರು: ಅಖಿಲ ಭಾರತ ಮುಂಡಾಲ ಯುವ ವೇದಿಕೆ ಮಹಿಳಾ ಘಟಕದ ಸಾರಥ್ಯದಲ್ಲಿ ನಗರದ ತುಳುಭವನದಲ್ಲಿ ಆಟಿಡೊಂಜಿ ಆಯನ ಕಾರ್ಯಕ್ರಮ ನಡೆಯಿತು.


ಕೃಷಿ ಇಲಾಖೆಯ ನಿವೃತ್ತ ಕಚೇರಿ ವ್ಯವಸ್ಥಾಪಕರಾದ ವೇದ ವಿಶ್ವನಾಥ್ ಉದ್ಘಾಟಿಸಿದರು. ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅತಿಥಿಯಾಗಿದ್ದರು. ಮುಂಡಾಲ ಸಮುದಾಯ ಹಾಗೂ ಬಬ್ಬುಸ್ವಾಮಿ ಆರಾಧಕರ ಸಮಾಜಮುಖಿ ಸೇವೆ ಅನನ್ಯ ಮತ್ತು ಅಪಾರ. ಪರಿಶಿಷ್ಟ ಅಭ್ಯುದಯಕ್ಕಾಗಿ ನಿಮ್ಮ ಜೊತೆ ಸದಾ ಕೈಜೋಡಿಸುವೆ ಎಂದು ಹೇಳಿದರು.


ಈ ಸಂದರ್ಭದಲ್ಲಿ ಶಾಸಕಿಯವರನ್ನು ಮುಂಡಾಲ ವೇದಿಕೆ ವತಿಯಿಂದ ಸನ್ಮಾನಿಸಲಾಯಿತು.
ಸರ್ಕಾರಿ ಪ್ರಾಥಮಿಕ ಶಾಲೆ ಮನಾಂಪಾಡಿ ಮುಲ್ಕಿಯ ಶಿಕ್ಷಕಿ ಸುನಂದ ಜಯರಾಮ್ ಅದಮಾರ್ ರವರು ಆಟಿಯ ಕಾಲದ ಕಷ್ಟದ ದಿನಗಳು, ಆ ಕಾಲದ ಶಿಕ್ಷಣ ವ್ಯವಸ್ಥೆ, ವಿವಿಧ ಆಟಗಳು, ಆಹಾರ ಪದ್ಧತಿ, ಜನರ ಸಾಮಾಜಿಕ ಸ್ಥಿಗತಿಗಳ ಬಗ್ಗೆ ಮನನ ಮಾಡಿದರು.


ಯುವ ವೇದಿಕೆ ಅಧ್ಯಕ್ಷ ಪ್ರಶಾಂತ್ ಕಾಟಿಪಳ್ಳ, ಕೆನರಾ ಬ್ಯಾಂಕ್ ಜನರಲ್ ಮ್ಯಾನೇಜರ್ ರಾಜಶ್ರೀ ಕಾಪಿಕಾಡ್, ಮಂಗಳೂರು ವಿಶ್ವವಿದ್ಯಾಲಯದ ಮುಖ್ಯ ಗ್ರಂಥ ಪಾಲಕಿ ಡಾ.ವನಜಾ ಬೋಳೂರು, ಮ.ನ.ಪಾ. ಕಚೇರಿ ವ್ಯವಸ್ಥಾಪಕಿ ಪುಷ್ಪಲತಾ ನವೀನ್, ಎನ್‌ಂಪಿಟಿ ಯ ನಿವೃತ್ತ ಕಚೇರಿ ವ್ಯವಸ್ಥಾಪಕಿ ಕಲಾವತಿ ಯು.ಎಸ್.ಕಾಪಿಕಾಡ್, ಭಜನಾ ಸಂಕೀರ್ತನೆಗಾರರಾದ ಲೋಲಾಕ್ಷೀ ಚೇಳಾರ್, ಎ.ಜೆ.ಇನಸ್ಟಿಟ್ಯೂಟ್ ಆಫ್ ಡೆಂಟಲ್ ಸೈಯನ್ಸ್ ನ ಸಹಾಯಕ ಪ್ರಾಧ್ಯಾಪಕಿ ಡಾ.ರಶ್ಮಿ ಜಯಚಂದ್ರ, ಪರಿಶಿಷ್ಟ ಹಿತರಕ್ಷಣಾ ಸಂಘ ಉರ್ವದ ಇದರ ಅಧ್ಯಕ್ಷೆ ಮಲ್ಲಿಕಾ ಉರ್ವ, ಮುಂಡಾಲ ಯುವ ವೇದಿಕೆಯ ಉಪಾಧ್ಯಕ್ಷೆ ದೀಪಾ ಪ್ರಸನ್ನ ತಲಪಾಡಿ ಉಪಸ್ಥಿತರಿದ್ದರು.


ಚೈತ್ರ ಸ್ವಾಗತಿಸಿದರು, ಪ್ರೀತಿಕಾ ಹಾಗೂ ಶರಣ್ಯ ನಿರೂಪಿಸಿದರು, ಸುಪ್ರಿತಾ ತಲಪಾಡಿ ವಂದಿಸಿದರು, ನಯನ ಹಾಗೂ ಶ್ರದ್ಧಾ ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಹಿಸಿದರು.