ಜಿಲ್ಲೆ

ಕಕ್ಕೇರಾ ಜೆಸ್ಕಾಂ ಕಚೇರಿ ಮುಂದೆ ಪುರಸಭೆ ಸದಸ್ಯರಿಂದ ರಾತ್ರೋರಾತ್ರಿ ಧರಣಿ

ವಿಜಯವಾಣಿ ಸುದ್ದಿಜಾಲ ಕಕ್ಕೇರಾ

ವಿದ್ಯುತ್ ಸರಬರಾಜು ಸಮಸ್ಯೆ ಪರಿಹರಿಸುವಂತೆ ಆಗ್ರಹಿಸಿ ಕಕ್ಕೇರಾ ಪಟ್ಟಣದಲ್ಲಿ ಇರುವ ಜೆಸ್ಕಾಂ ಕಚೇರಿ ಮುಂದೆ ಪುರಸಭೆ ಸದಸ್ಯರೊಬ್ಬರು ಬಡಾವಣೆ ಜನರ ಜತೆಗೂಡಿ ಗುರುವಾರ ಮಧ್ಯರಾತ್ರಿ ಧರಣಿ ಕುಳಿತಕೊಂಡಿದ್ಸಾರೆ.

2 ನೇ ವಾರ್ಡ್ ಸದಸ್ಯ ಸದ್ಧಾಂ ಹುಸೇನ್ ಎಂಬುವರು ಈಗ ಧರಣಿ ನಡೆಸುತ್ತಿದ್ದಾರೆ. ಕಕ್ಕೇರಾ ಪುರಸಭೆ ವ್ಯಾಪ್ತಿಯ ವಾರ್ಡ್ ಸಂಖ್ಯೆ 2 ರ ವ್ಯಾಪ್ತಿಯಲ್ಲಿ ಬರುವ ಬಡಾವಣೆಯಲ್ಲಿ ವಿದ್ಯುತ್ ಪೂರೈಕೆ ಇಲ್ಲದೆ ಸುಮಾರು 60-70 ಮನೆಗಳ ನಿವಾಸಿಗಳು ಕತ್ತಲಲ್ಲಿ ಇರುವಂತಾಗಿದೆ. ಈ ಕುರಿತು ದೂರು ನೀಡಿದರೂ ಜೆಸ್ಕಾಂನವರು ಸ್ಪಂದಿಸದ ಕಾರಣ ರಾತ್ರೋರಾತ್ರಿ ಅವರು ಧರಣಿ ಶುರು ಮಾಡಿದ್ದಾರೆ. ಅಧಿಕಾರಿಗಳು ಬಂದು ಸಮಸ್ಯೆ ಇತ್ಯರ್ಥಪಡಿಸುವವರೆಗೂ ಸ್ಥಳದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತುಕೊಂಡಿದ್ದಾರೆ. ಅಧಿಕಾರಿಗಳ ಧರಣಿ ಸ್ಥಳಕ್ಕೆ ಆಗಮಿಸಿದರು.