ಜಿಲ್ಲೆ

ಮುಮ್ಮಿಗಟ್ಟಿ ಗ್ರಾ.ಪಂ. ಅಧ್ಯಕ್ಷರಾಗಿ ಸುವರ್ಣಾ; ಲಾಟರಿಯಲ್ಲಿ ಕುದುರಿದ ಲಕ್!

ಧಾರವಾಡ: ತಾಲೂಕಿನ ಮುಮ್ಮಿಗಟ್ಟಿ ಗ್ರಾಮ ಪಂಚಾಯಿತಿಯ ಮುಂದಿನ ಎರಡೂವರೆ ವರ್ಷಗಳ ಅವಽಗೆ ಮಂಗಳವಾರ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆ ಚುನಾವಣೆ ನಡೆಯಿತು. ಸುವರ್ಣಾ ಕೊಟ್ರೆ ಅವರಿಗೆ ಲಾಟರಿ ಮೂಲಕ ಅಧ್ಯಕ್ಷರಾಗುವ ಲಕ್ ಕುದುರಿತು.
ಮುಮ್ಮಿಗಟ್ಟಿ ಗ್ರಾಮ ಪಂಚಾಯಿತಿಯಲ್ಲಿ ೧೨ ಸದಸ್ಯ ಬಲವಿದ್ದು, ಸಾಮಾನ್ಯ ಮಹಿಳೆಗೆ ಅಧ್ಯಕ್ಷ ಮೀಸಲಾತಿ ನಿಗದಿಯಾಗಿತ್ತು. ಸುವರ್ಣಾ ಕೊಟ್ರೆ ಮತ್ತು ಸವಿತಾ ಮರಿತಮ್ಮನವರ ನಾಮಪತ್ರ ಸಲ್ಲಿಸಿದ್ದರು. ೧ ಗಂಟೆಗೆ ನಡೆದ ಮತದಾನ ಪ್ರಕ್ರಿಯೆಯಲ್ಲಿ ಇಬ್ಬರೂ ತಲಾ ೬ ಮತ ಪಡೆದರು.
ಚುನಾವಣಾ ಅಽಕಾರಿಯಾಗಿದ್ದ ಎಸ್.ಎನ್. ಗೌಡರ ನಿಯಮಾವಳಿಯಂತೆ ಎಲ್ಲ ೧೨ ಸದಸ್ಯರ ಸಮ್ಮುಖದಲ್ಲಿ ಲಾಟರಿ ಎತ್ತುವ ಪ್ರಕ್ರಿಯೆ ನಡೆಸಿದರು. ಲಾಟರಿಯಲ್ಲಿ ಸುವರ್ಣಾ ಕೊಟ್ರಿ ಅವರ ಹೆಸರು ಬಂದಿದ್ದರಿAದ ಅವರನ್ನು ಅಧ್ಯಕ್ಷರನ್ನಾಗಿ ಘೋಷಿಸಲಾಯಿತು. ಪಿಡಿಒ ಆನಂದ ಕೆಂಚಣ್ಣವರ ಹಾಗೂ ಸಿಬ್ಬಂದಿ ಚುನಾವಣಾ ಕಾರ್ಯಕ್ಕೆ ಸಹಕರಿಸಿದರು.
ಇದೇವೇಳೆ ಉಪಾಧ್ಯಕ್ಷ ಆಯ್ಕೆಗೆ ವಿಠ್ಠಲ ಭಟ್ಟಂಗಿ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವರನ್ನು ಅವಿರೋಧ ಆಯ್ಕೆ ಎಂದು ಘೋಷಿಸಲಾಯಿತು.