ಬೋರಗಾಂವ: ಇಲ್ಲಿನ ವಿವಿಧೋದ್ದೇಶ ಗ್ರಾಮೀಣ ಕೃಷಿ ಸಹಕಾರಿ ಸಂಘ ಪ್ರಸಕ್ತ ವರ್ಷದಲ್ಲಿ 48.9 ಲ ರೂ. ಸಾಲ ವಿತರಿಸಿ 1.55 ಕೋಟಿ ರೂ. ಲಾಭ ಗಳಿಸಿದೆ ಎಂದು ಸಂದ ಅಧ್ಯ ಉತ್ತಮ ಪಾಟೀಲ ತಿಳಿಸಿದರು.
ಪಟ್ಟಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೋರಗಾಂವ ಮತ್ತು ಸುತ್ತಮುತ್ತಲಿನ ಪ್ರದೇಶದ ರೈತರ ಆರ್ಥಿಕ ಅಭಿವೃದಿಟಛಿಗಾಗಿ ದಿ.ರಾವಸಾಹೇಬ ಪಾಟೀಲರು ಈ ಕೃಷಿ ಸಂ ಸ್ಥಾಪಿಸಿದರು. ರೈತರ ಆರ್ಥಿಕ ಉನ್ನತಿಗಾಗಿ ಕೃಷಿ ಸಂದ ಮೂಲಕ ಅನೇಕ ಯೋಜನೆಗಳನ್ನು ಕೈಗೊಳ್ಳಲಾಗಿದೆ. ಸಂ 3023 ಸದಸ್ಯರನ್ನು ಹೊಂದಿದ್ದು, 2.59 ಲ ರೂ. ಷೇರು ಬಂಡವಾಳ, 56.7 ಲ ರೂ. ಠೇವಣಿ, 10.98 ಲ ನಿಧಿ, ಬಿಡಿಸಿಸಿ ಡಿಕೆಸಿಸಿ ಬ್ಯಾಂಕ್ನಿಂದ 22.39 ಲ ರೂ. ಸಾಲ, 48.9 ಲ ರೂ. ಸದಸ್ಯರ ಸಾಲ, 42.96 ಲ ರೂ. ಹೂಡಿಕೆ, 423 ಕೋಟಿ 56 ಲ ರೂ. ವಾರ್ಷಿಕ ವಹಿವಾಟು ಮತ್ತು ಶೇ.95.14ರಷ್ಟು ವಸೂಲಿ ಮಾಡಲಾಗಿದೆ. ಗಣಕೀಕತ ಸೇವೆಗಳು, ಅಪಘಾತ ವಿಮೆ ಸೇರಿ ವಿವಿಧ ಸೇವೆ ಲಭ್ಯವಾಗುವಂತೆ ಮಾಡಲಾಗಿದೆ ಎಂದರು.
ಸಂದ ಉಪಾಧ್ಯ ಸುಮಿತ ರೋಡ್ಡ, ನಿರ್ದೇಶಕ ರಾಜೇಂದ್ರ ಪಾಟೀಲ, ಪ್ರದಿಪ ಮಾಳಿ, ಬಾಳಾಸಾಹೇಬ ಸಾತಪುತೆ, ಪ್ರವಿಣ ಪಾಟೀಲ, ರಾಜೇಂದ್ರ ಐದಮಾಳೆ, ರಾಜು ಗಜ್ರೆ, ಸುನೀತಾ ಬಂಕಾಪುರೆ, ಅಶೋಕ ಮಾಳಿ, ತೈಮೂರ ಮುಜಾವರ, ಆರ್.ಟಿ.ಚೌಗುಲಾ, ರಾಕೆಶ್ ಇತರರಿದ್ದರು.