Invitation to a poetry competition 
ಜಿಲ್ಲೆ

ಮರಾಠಿ ಸಾಹಿತ್ಯ ಪರಿಷತ್ತಿನಿಂದ ಬಹುಭಾಷಾ ಕವಿಗೋಷ್ಠಿ

ಗಿರೀಶ ಸಗರ

ವಿಜಯಪುರ : ರಾಜ್ಯ ಮರಾಠಿ ಸಾಹಿತ್ಯ ಪರಿಷತ್ತಿನಿಂದ ನಗರದ ಹೋಟೆಲ್​ ಭವಾನಿ ಸಭಾಂಗಣದಲ್ಲಿ ಫೆ.16ರಂದು ಬೆಳಗ್ಗೆ 10.30ಕ್ಕೆ ಬಹುಭಾಷಾ ಕವಿಗೋಷ್ಠಿ ಹಾಗೂ ಜಿಲ್ಲಾ ಸಂದ ನೂತನ ಪದಾ-ಧಿಕಾರಿಗಳ ಪದಗ್ರಹಣ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಸಂದ ಜಿಲ್ಲಾಧ್ಯ ದೀಪಕ ಶಿಂತ್ರೆ ತಿಳಿಸಿದ್ದಾರೆ.

ಈ ಸಮಾವೇಶದಲ್ಲಿ ಮರಾಠಿ, ಕನ್ನಡ, ಹಿಂದಿ, ಉರ್ದು, ಗುಜರಾತಿ ಸೇರಿದಂತೆ ವಿವಿಧ ಭಾಷೆಗಳ ಕವಿಗಳು ಭಾಗವಹಿಸಲಿದ್ದಾರೆ.

ಅಖಿಲ ಭಾರತೀಯ ಮರಾಠಿ ಸಾಹಿತ್ಯ ಮಹಾಮಂಡಳದ ಉಪಾಧ್ಯ ಗುರಯ್ಯ ರೈ ಸ್ವಾಮಿ ಉದ್ಘಾಟಿಸುವರು. ಕಲಬುರಗಿ ಸಂದ ಕಾರ್ಯದರ್ಶಿ ಪ್ರಭಾಕರ ಸಲಗರೆ, ಬಾಗಲಕೋಟೆ ಜಿಲ್ಲಾಧ್ಯೆ ಸುಧಾ ಬೆಟಗೇರಿ, ಚಿಕ್ಕೋಡಿ ಅಧ್ಯೆ ಲತಾ ಮಾನೆ ಸಂಕೇಶ್ವರ್​, ಪ್ರಕಾಶ ರಜಪೂತ, ಈ ಭಾಗದ ಖ್ಯಾತ ಕವಿಗಳು ಭಾಗವಹಿಸಲಿದ್ದು, ಸಂದ ವಿಜಯಪುರ ಜಿಲ್ಲಾಧ್ಯ ದೀಪಕ ಶಿಂತ್ರೆ ಅಧ್ಯತೆ ವಹಿಸುವರು.

ಜಿಲ್ಲಾ ಉಪಾಧ್ಯಕ್ಷ ಡಾ. ಸದಾಶಿವ ಪವಾರ್​, ಕಾರ್ಯದರ್ಶಿ ಕನ್ಹಯ್ಯಾ ಪೇಠಕರ್​, ಪ್ರೊ. ಸಹ ಕಾರ್ಯದರ್ಶಿ ಗಂಗಾಧರ ಂಡ, ಕೋಶಾಧ್ಯಕ್ಷ ಸುಧಾಕರ ಶಿಂಧೆ, ಡಾ. ಎಸ್​.ಜೆ. ಜಾಗೀರದಾರ, ಶ್ರೀಪಾದ ಪಾಟಣಕರ್​, ರೂಪಾ ಹಿಬಾರೆ, ಪ್ರೊ. ರೇಖಾ ಅಧ್ಯಾಪಕ, ಪ್ರೊ.ರೇವತಿ ಕತ್ತಿ, ಪ್ರೊ. ಉಲ್ಕಾ ಜಾಧವ ಅವರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದ್ದಾರೆ.