ಕುಂದಾಪುರ: ರಾಷ್ಟ್ರೀಯ ಹೆದ್ದಾರಿ 66ರ ಬೈಂದೂರು-ಕುಂದಾಪುರ ಮಾರ್ಗದ ಹೊಸಾಡು ಗ್ರಾಮದ ಮುಳ್ಳಿಕಟ್ಟೆ ಸರ್ಕಲ್‌ನಲ್ಲಿ ದಿನನಿತ್ಯ ವಾಹನ ಅಪಘಾತ ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಎನ್‌ಎಚ್‌ಎಐ ಯೋಜನೆ ನಿರ್ದೇಶಕ ಶಿವಕುಮಾರ್ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮುಳ್ಳಿಕಟ್ಟೆ ಸರ್ಕಲ್‌ನಲ್ಲಿ ಬೈಂದೂರು, ಕುಂದಾಪುರ, ಆಲೂರು, ಗಂಗೊಳ್ಳಿ ಮೀನುಗಾರಿಕೆ ಬಂದರು ಭಾಗದಿಂದ ದಿನನಿತ್ಯ ಸಾವಿರಾರು ವಾಹನಗಳು ಸಂಪರ್ಕಿಸುವ ಮುಳ್ಳಿಕಟ್ಟೆ ಜಂಕ್ಷನ್‌ನಲ್ಲಿ ಸಂಭವಿಸುತ್ತಿರುವ ಅಪಘಾತದಿಂದ ಜನರ ಜೀವಕ್ಕೆ ಕಳೆದುಕೊಳ್ಳುತ್ತಿದ್ದಾರೆ. ಅಪಘಾತವಾಗದಂತೆ ವೈಜ್ಞಾನಿಕ ರೀತಿಯಲ್ಲಿ ವೃತ್ತ ನಿರ್ಮಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಹೊಸಾಡು ಗ್ರಾಮ ಪಂಚಾಯಿತಿ ಎದುರುಗಡೆಯ ಮುಳ್ಳಿಕಟ್ಟೆ ಸರ್ಕಲ್ ಬಳಿಯಲ್ಲಿರುವ ಸ್ಥಳ ಸರ್ಕಾರಿ ಭೂಮಿ ಆಗಿದ್ದು, ಈ ಸ್ಥಳದಲ್ಲಿ ಬಹಳ ವರ್ಷಗಳಿಂದ ಅಂಗಡಿಗಳು ಇದೆ. ವೃತ್ತ ಅಭಿವೃದ್ಧಿಪಡಿಸುವ ಹಿನ್ನೆಲೆಯಲ್ಲಿ ಅಂಗಡಿಗಳನ್ನು ತೆರವು ಮಾಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈಗಾಗಲೇ ಅಂಗಡಿ ಮಾಲೀಕರಿಗೆ ಪರಿಹಾರ ನೀಡಿದ್ದು, ಕೆಲವು ಅಂಗಡಿ ಮಾಲೀಕರು ಪರಿಹಾರ ಪಡೆದು ಅಂಗಡಿ ತೆರವು ಮಾಡಿಲ್ಲ ಎಂದು ತಿಳಿದುಬಂದಿದೆ.
ಕುಂದಾಪುರ ತಹಸೀಲ್ದಾರ್ ಪ್ರದೀಪ್ ಕುರ್ಡೇಕರ್, ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಡಾ.ರವಿ ಕುಮಾರ್ ಹುಕ್ಕೇರಿ, ಗಂಗೊಳ್ಳಿ ಪೊಲೀಸ್ ಠಾಣಾ ಉಪನಿರೀಕ್ಷಕ ಹರೀಶ್ ಆರ್.ನಾಯ್ಕ, ಕಂದಾಯ ನಿರೀಕ್ಷಕ ರಾಘವೇಂದ್ರ ದೇವಾಡಿಗ, ಹೊಸಾಡು ಗ್ರಾಪಂ ಮಾಜಿ ಅಧ್ಯಕ್ಷ ಚಂದ್ರಶೇಖರ ಪೂಜಾರಿ, ಪ್ರದೀಪ್ ಪೂಜಾರಿ, ರಾಘವೇಂದ್ರ ಆಚಾರ್ಯ, ನಾಗರಿಕರು, ಗಂಗೊಳ್ಳಿ ಪೊಲೀಸ್ ಠಾಣೆ ಸಿಬ್ಬಂದಿ ಉಪಸ್ಥಿತರಿದ್ದರು.
ಇನ್ನೊಂದು ವಾರದೊಳಗೆ ಸುತ್ತಲಿನ ಎಲ್ಲ ಅಂಗಡಿಗಳನ್ನು ತೆರವು ಮಾಡಿ, ಮುಳ್ಳಿಕಟ್ಟೆ ವೃತ್ತವನ್ನು ವೈಜ್ಞಾನಿಕ ರೀತಿಯಲ್ಲಿ ನಿರ್ಮಿಸಲು ಕಾಮಗಾರಿ ಪ್ರಾರಂಭಿಸಲಾಗುವುದು. ಸಾರ್ವಜನಿಕರು ಹಾಗೂ ಸ್ಥಳೀಯರು ಇಲಾಖೆ ಜತೆ ಸಹಕರಿಸಬೇಕು - ಶಿವಕುಮಾರ್ ಎನ್‌ಎಚ್‌ಎಐ ಯೋಜನೆ ನಿರ್ದೇಶಕ https://www.vijayavani.net/new-idol-of-kala-rahu-installed-at-kabbinale-temple https://www.vijayavani.net/manoor-temple-annual-fair-kicks-off