ಮೂಲ್ಕಿ: ಗ್ರಾಮೀಣ ಮಹಿಳೆಯರನ್ನು ಸ್ವ-ಉದ್ಯೋಗ ಮೂಲಕ ಸ್ವಾವಲಂಬಿಯಾಗಿ ಬೆಳೆಯಲು ಸಹಕಾರಿಯಾಗುವಂತೆ ಒಕ್ಕೂಟದ ವತಿಯಿಂದ ಗ್ರಾಮೀಣ ಭಾಗದಲ್ಲಿ ನಡೆಯುವ ತರಬೇತಿ ಕಾರ್ಯಕ್ರಮಗಳಿಗೆ ಯುವ ಜನತೆ ಪ್ರೋತ್ಸಾಹ ನೀಡಬೇಕು ಎಂದು ಮೂಲ್ಕಿ ತಾಲೂಕು ಸಂಜೀವಿನಿ ಒಕ್ಕೂಟ ಅಧ್ಯಕ್ಷೆ ಕಕ್ವಗುತ್ತು ಭಾನುಮತಿ ಶೆಟ್ಟಿ ಹೇಳಿದರು.
ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಸೋಮವಾರ ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ, ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ, ಮೂಲ್ಕಿ ಶಾಂಭವಿ ಸಂಜೀವಿನಿ ಒಕ್ಕೂಟ, ಬಿಲ್ಲವ ಸಮಾಜ ಸೇವಾ ಸಂಘ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಮಹಿಳೆಯರಿಗೆ ಸೀರೆ ಗೊಂಡೆ ಹಾಕುವ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ಸಿಇಒ ವಿಶ್ವನಾಥ ರೈ ಉದ್ಘಾಟಿಸಿದರು. ಅತಿಕಾರಿಬೆಟ್ಟು ಗ್ರಾಪಂ ಉಪಾಧ್ಯಕ್ಷ ಮನೋಹರ ಕೋಟ್ಯಾನ್, ಬ್ಯಾಂಕ್ ಆಫ್ ಬರೋಡಾ ಮೂಲ್ಕಿ ಶಾಖಾ ಹಿರಿಯ ಪ್ರಬಂಧಕ ಸಚಿನ್ ಹೆಗ್ಡೆ, ಡಿಪಿಎಂ ಎನ್‌ಆರ್‌ಎಲ್‌ಎಂ ಶಕುಂತಲಾ, ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘ ಅಧ್ಯಕ್ಷ ವಾಮನ್ ಕೋಟ್ಯಾನ್ ನಡಿಕುದ್ರು, ಮಣಿಪಾಲ ಭಾರತೀಯ ವಿಕಾಸ ಟ್ರಸ್ಟ್‌ನ ಜೀವನ್ ಕೊಲ್ಯ ಮತ್ತಿತರರು ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿ ಶುಭಲಕ್ಷ್ಮೀ ಮಾಹಿತಿ ನೀಡಿದರು. ಸತ್ಯಾ ಶೆಟ್ಟಿ ಅತಿಕಾರಿಬೆಟ್ಟು ವಂದಿಸಿದರು. ಪ್ರೀತಿಕಾ ಕಿಲ್ಪಾಡಿ ನಿರೂಪಿಸಿದರು.
ಮಹಿಳೆಯರು ಶಿಬಿರಗಳ ಪ್ರಯೋಜನ ಪಡೆದು ಸ್ವಉದ್ಯೋಗ ಮೂಲಕ ಸ್ವಾವಲಂಬಿಗಳಾಗಿ ಬೆಳೆಯಲು ಆರ್ಥಿಕ ಸಹಕಾರವನ್ನು ಬ್ಯಾಂಕ್ ಆಫ್ ಬರೋಡಾ ನೀಡುತ್ತಿದೆ. ವಿಶ್ವನಾಥ ರೈ, ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ಸಿಇಒ https://www.vijayavani.net/heat-waves-%e0%b2%95%e0%b2%be%e0%b2%b0%e0%b2%b5%e0%b2%be%e0%b2%b0-%e0%b2%b8%e0%b2%a6%e0%b2%be%e0%b2%b6%e0%b2%bf%e0%b2%b5%e0%b2%97%e0%b2%a1%e0%b2%a6%e0%b2%b2%e0%b3%8d%e0%b2%b2%e0%b2%bf-41-3-%e0%b2%a1 https://www.vijayavani.net/dharmasthala-padayathre