ಜಿಲ್ಲೆ

ಮೂರ್ತೆದಾರಿಕೆಯ ಉತ್ತೇಜನ, ಸದಸ್ಯರಿಗೆ ವಿವಿಧ ಯೋಜನೆ : ಕೆ.ರಾಘು ಸುವರ್ಣ ಮಾಹಿತಿ

ಮೂಲ್ಕಿ: ಮೂರ್ತೆದಾರಿಕೆಯ ಉತ್ತೇಜನದೊಂದಿಗೆ ಗ್ರಾಮಿಣ ವರ್ಗಗಳ ಕೃಷಿ ಹಾಗೂ ಆರ್ಥಿಕ ಅಭಿವೃದ್ಧಿಗಾಗಿ ರೂಪುಗೊಂಡ ಸಂಘವು ಸದಸ್ಯರಿಗೆ ವಿವಿಧ ಯೋಜನೆಗಳನ್ನು ನೀಡುವ ಜತೆಗೆ ಶೇ.12 ಲಾಭಾಂಶ ನೀಡುತ್ತಿದೆ ಎಂದು ಸಂಘದ ಅಧ್ಯಕ್ಷ ಕೆ.ರಾಘು ಸುವರ್ಣ ಹೇಳಿದರು.

ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಬುಧವಾರ ಮೂಲ್ಕಿ ಮೂರ್ತೆದಾರರ ಸೇವಾ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಹಿರಿಯ ಮೂರ್ತೆದಾರ ವಸಂತ ಅಮೀನ್ ನಡಿಕೊಪ್ಪಲ ಅವರನ್ನು ಸನ್ಮಾನಿಸಲಾಯಿತು. ಉಪಾಧ್ಯಕ್ಷ ರಮೇಶ್ ಜಿ.ಅಮೀನ್ ನಡಿಕೊಪ್ಪಲ, ನಿರ್ದೇಶಕರಾದ ಯದೀಶ್ ಅಮೀನ್ ಕೊಕ್ಕರಕಲ್, ಚಂದ್ರಶೇಖರ ಸುವರ್ಣ, ಗಣೇಶ್ ಕುಕ್ಯಾನ್, ಸದಾನಂದ ಪೂಜಾರಿ, ಹರೀಂದ್ರ ಸುವರ್ಣ, ಸುಧಾಕರ ಜೆ.ಸುವರ್ಣ, ಸುನೀತಾ ಡಿ.ಮೂಲ್ಕಿ, ಚರಿಷ್ಮಾ ಶ್ರೀನಿವಾಸ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಜಯ ಕುಮಾರ್ ಕುಬೆವೂರು ಮತ್ತು ಸದಸ್ಯರು ಉಪಸ್ಥಿತರಿದ್ದರು. ಕೆ.ರಾಘು ಸುವರ್ಣ ಸ್ವಾಗತಿಸಿದರು. ವಿಜಯ ಕುಮಾರ್ ಕುಬೆವೂರು ವರದಿ ಮಂಡಿಸಿದರು. ಹರೀಂದ್ರ ಸುವರ್ಣ ವಂದಿಸಿದರು.